ದುಬೈ:ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ಅವರನ್ನು ಆರು ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧಿಸಲಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗುರುವಾರ ಶಿಕ್ಷೆ ಪ್ರಕಟಿಸಿತು. ಅಬುಧಾಬಿ ಟಿ10 ಲೀಗ್ನಿಂದ ಪಡೆದ ಪ್ರಯೋಜನಗಳನ್ನು ಬಹಿರಂಗಪಡಿಸುವುದು ಮತ್ತು ಮಾಹಿತಿ ಸೋರಿಕೆ ಮಾಡಿರುವುದು ಹಾಗು ತನಿಖಾಧಿಕಾರಿಗೆ ಸಹಕರಿಸದೇ ಇದ್ದುದಕ್ಕಾಗಿ ಸ್ಯಾಮ್ಯುಯೆಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 2021ರಲ್ಲಿ ಐಸಿಸಿ ಇಸಿಬಿ ಕೋಡ್ ಅಡಿಯಲ್ಲಿ ಗೊತ್ತುಪಡಿಸಿದ ಭ್ರಷ್ಟಾಚಾರ ವಿರೋಧಿ ಅಧಿಕಾರಿ ಸ್ಯಾಮುಯೆಲ್ಸ್ ವಿರುದ್ಧ ಆರೋಪ ಮಾಡಿದ್ದರು. ಸ್ಯಾಮುಯೆಲ್ಸ್, ಈ ವರ್ಷದ ಆಗಸ್ಟ್ನಲ್ಲಿ ನಾಲ್ಕು ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಐಸಿಸಿ ಪ್ರಕಟಣೆ ತಿಳಿಸಿದೆ. ಸುಮಾರು ಎರಡು ದಶಕಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿರುವ ಸ್ಯಾಮುಯೆಲ್ಸ್ ಆ ಸಮಯದಲ್ಲಿ ಹಲವಾರು ಭ್ರಷ್ಟಾಚಾರ-ವಿರೋಧಿ ಸೆಷನ್ಗಳಲ್ಲಿ ಭಾಗವಹಿಸಿದ್ದರು. ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಅಡಿಯಲ್ಲಿ ತನ್ನ ಜವಾಬ್ದಾರಿಗಳೇನು ಎಂಬುದು ಅವರಿಗೆ ತಿಳಿದಿತ್ತು ಎಂದು ಐಸಿಸಿ ಹೆಚ್ ಆರ್ ಮತ್ತು ಇಂಟೆಗ್ರಿಟಿ ಯೂನಿಟ್ನ ಮುಖ್ಯಸ್ಥರಾಗಿರುವ ಅಲೆಕ್ಸ್ ಮಾರ್ಷಲ್ ತಿಳಿಸಿದರು.
ಸ್ಯಾಮುಯೆಲ್ಸ್ ತನಿಖೆಯ ಸಮಯದಲ್ಲಿ ಭ್ರಷ್ಟಾಚಾರ-ವಿರೋಧಿ ಅಧಿಕಾರಿಯು ಉಡುಗೊರೆಗಳು, ಪಾವತಿಗಳು ಅಥವಾ ಇತರ ಪ್ರಯೋಜನಗಳ ಸ್ವೀಕೃತಿಯನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಕಂಡುಬಂದಿದೆ. $750ಕ್ಕಿಂತ ಹೆಚ್ಚು ಮೌಲ್ಯದ ಉಡುಗೊರೆಗಳಿಗೆ ಅಧಿಕೃತ ರಸೀದಿಗಳನ್ನು ಬಹಿರಂಗಪಡಿಸಲು ಸ್ಯಾಮುಯೆಲ್ಸ್ ವಿಫಲರಾಗಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ಸಹಕರಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದು ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.