ಬರ್ಮಿಂಗ್ಹ್ಯಾಮ್(ಎಡ್ಜಬಾಸ್ಟನ್):ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ದಿಗ್ಗಜರ ಪಟ್ಟಿ ಸೇರಿದ್ದಾರೆ. ಸೆನಾ ದೇಶಗಳಲ್ಲಿ 100+ ವಿಕೆಟ್ ಪಡೆದ ಸಾಲಿನಲ್ಲಿ ಇದೀಗ ಅನಿಲ್ ಕುಂಬ್ಳೆ, ಜಹೀರ್ ಖಾನ್ ದಾಖಲೆ ಪಟ್ಟಿ ಸೇರ್ಪಡೆಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಬರ್ಮಿಂಗ್ಹ್ಯಾಮ್ ಟೆಸ್ಟ್ನಲ್ಲಿ ಜಾಕ್ ಕ್ರಾಲಿ ವಿಕೆಟ್ ಪಡೆದುಕೊಳ್ಳುತ್ತಿದ್ದಂತೆ ಬುಮ್ರಾ ಈ ದಾಖಲೆ ಬರೆದರು. ಜೊತೆಗೆ ಈ ಸಾಧನೆ ಮಾಡಿರುವ 6ನೇ ಬೌಲರ್ ಎಂಬ ದಾಖಲೆ ಬರೆದರು. ಜಸ್ಪ್ರೀತ್ ಬುಮ್ರಾ ಸೆನಾ ದೇಶಗಳಲ್ಲಿ 100 ವಿಕೆಟ್ ಪಡೆದುಕೊಂಡಿದ್ದು, ಈ ಪೈಕಿ ಇಂಗ್ಲೆಂಡ್ನಲ್ಲಿ 36, ಆಸ್ಟ್ರೇಲಿಯಾದಲ್ಲಿ 26 ವಿಕೆಟ್ ಕಬಳಿಸಿದ್ದಾರೆ.
ಸೆನಾ ದೇಶಗಳಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಕೆ
- ಅನಿಲ್ ಕುಂಬ್ಳೆ 141
- ಇಶಾಂತ್ ಶರ್ಮಾ 130
- ಜಹೀರ್ ಖಾನ್ 119
- ಮೊಹಮ್ಮದ್ ಶಮಿ 119
- ಕಪಿಲ್ ದೇವ್ 117
- ಜಸ್ಪ್ರೀತ್ ಬುಮ್ರಾ 101
ಒಂದೇ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್:ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿವೊಂದರಲ್ಲಿ ವೇಗದ ಬೌಲರ್ ಬುಮ್ರಾ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 2021-22ರಲ್ಲಿ 23 ವಿಕೆಟ್ ಪಡೆದುಕೊಂಡಿರುವ ಬುಮ್ರಾ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ 1981-82ರಲ್ಲಿ ಕಪಿಲ್ ದೇವ್ ಇಂಗ್ಲೆಂಡ್ ವಿರುದ್ಧ 22 ವಿಕೆಟ್ ಪಡೆದುಕೊಂಡಿದ್ದರು. ಇದಾದ ಬಳಿಕ 2014ರಲ್ಲಿ ಭುವನೇಶ್ವರ್ ಕುಮಾರ್ 19 ವಿಕೆಟ್ ಕಿತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 35ರನ್ಗಳಿಕೆ ಮಾಡುವ ಮೂಲಕ ಬುಮ್ರಾ ಈಗಾಗಲೇ ವಿಶ್ವ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿರಿ:ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ದ್ರಾವಿಡ್ ಬದಲು ಲಕ್ಷ್ಮಣ್ ಕೋಚ್?