ಕರ್ನಾಟಕ

karnataka

ETV Bharat / sports

ಪಿಚ್​​ ತಿರುವು ಕುರಿತು ಮೊದಲೇ ಅರಿತು ಮಾನಸಿಕವಾಗಿ ಸಿದ್ಧನಾಗಿದ್ದೆ : ರೋಹಿತ್​​ ಶರ್ಮಾ - India vs England test series

ಸ್ಪಿನ್​​ ಸ್ನೇಹಿ ಪಿಚ್​​​ನಲ್ಲಿ ಬೌಲರ್​​ಗಳು ಪ್ರಾಬಲ್ಯ ಸಾಧಿಸುವ ಯೋಜನೆಯಿತ್ತು. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿದೆ. ಪಿಚ್‌ ಹೇಗೆ ಸಿದ್ದಪಡಿಸಲಾಗಿದೆ. ಪಿಚ್​​​ನಲ್ಲಿ ಚೆಂಡು ಹೇಗೆ ತಿರುವು ಪಡೆಯುತ್ತದೆ ಎಂಬುದರ ಕುರಿತು ನಮಗೆ ತಿಳಿದಿತ್ತು. ಆದ್ದರಿಂದ ಉತ್ತಮ ತರಬೇತಿ ಕೂಡ ಪಡೆದಿದ್ದೆವು..

India opening batsman Rohit Sharma
ರೋಹಿತ್​ ಶರ್ಮಾ

By

Published : Feb 13, 2021, 8:46 PM IST

ಚೆನ್ನೈ (ತಮಿಳುನಾಡು) :ಎರಡನೇ ಟೆಸ್ಟ್​ನ ಮೊದಲ ದಿನದಾಟದಲ್ಲಿ ಆಕರ್ಷಕ ಶತಕ ಸಿಡಿಸಿ ಲಯಕ್ಕೆ ಮರಳಿದ ಆರಂಭಿಕ ಆಟಗಾರ ರೋಹಿತ್​ ಶರ್ಮಾ, ಪಿಚ್​​​ನಲ್ಲಿ ತಿರುವು ಮತ್ತು ಬೌಲರ್​​ಗಳನ್ನು ಎದುರಿಸಲು ಸಮರ್ಥವಾಗಿ ಎದುರಿಸಲು ಮಾನಸಿಕವಾಗಿ ಸಿದ್ದನಾಗಿದ್ದೆ ಎಂದು ಹೇಳಿದರು.

18 ಬೌಂಡರಿ ಮತ್ತು ಎರಡು ಸಿಕ್ಸರ್​ಗಳೊಂದಿಗೆ 161 ರನ್ ಗಳಿಸಿದ ರೋಹಿತ್​​ ಶರ್ಮಾ, ಉಪನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ ಮಹತ್ವದ ಜೊತೆಯಾಟವಾಡಿದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು 162 ರನ್ ಸೇರಿಸಿದರು.

ಸ್ಪಿನ್​​ ಸ್ನೇಹಿ ಪಿಚ್​​​ನಲ್ಲಿ ಬೌಲರ್​​ಗಳು ಪ್ರಾಬಲ್ಯ ಸಾಧಿಸುವ ಯೋಜನೆಯಿತ್ತು. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿದೆ. ಪಿಚ್‌ ಹೇಗೆ ಸಿದ್ದಪಡಿಸಲಾಗಿದೆ. ಪಿಚ್​​​ನಲ್ಲಿ ಚೆಂಡು ಹೇಗೆ ತಿರುವು ಪಡೆಯುತ್ತದೆ ಎಂಬುದರ ಕುರಿತು ನಮಗೆ ತಿಳಿದಿತ್ತು. ಆದ್ದರಿಂದ ಉತ್ತಮ ತರಬೇತಿ ಕೂಡ ಪಡೆದಿದ್ದೆವು ಎಂದು ವರ್ಚುವಲ್​ ಸಭೆಯಲ್ಲಿ ಹೇಳಿದರು.

ಇದನ್ನೂ ಓದಿ...ಲಯಕ್ಕೆ ಮರಳಿದ ರೋಹಿತ್​ ಮಿಂಚಿನ ಶತಕ: ಮೊದಲ ದಿನದ ಅಂತ್ಯಕ್ಕೆ ಭಾರತ 300/6

ತಿರುವು ಪಡೆಯುವ ಪಿಚ್​ಗಳಲ್ಲಿ ಬೌಲರ್​​ಗಳಿಂದ ನಾವು ಒಂದು ಹೆಜ್ಜೆ ಮುಂದಾಲೋಚನೆಯಲ್ಲಿರಬೇಕು, ಪೂರ್ವಭಾವಿಯಾಗಿ ಸಿದ್ದರಾಗಬೇಕು. ಹಾಗೆಯೇ ಎಷ್ಟರ ಮಟ್ಟಿಗೆ ಬೌನ್ಸಿಂಗ್​ ಆಗುತ್ತಿದೆ ಎಂಬುದನ್ನು ಅರಿಯಬೇಕು. ಹೀಗಾಗಿ, ದೊಡ್ಡ ಹೊಡೆತಕ್ಕೂ ಮೊದಲು ನಾನು ಯೋಚಿಸುತ್ತಿದ್ದೆ. ಅದಕ್ಕಾಗಿ ನಾನು ಮಾನಸಿಕವಾಗಿ ಸಿದ್ದನಾಗಿದ್ದೆ ಎಂದರು.

ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ರೋಹಿತ್​ ಶರ್ಮಾ ಆಸರೆಯಾದರು. ಮೈದಾನದಾದ್ಯಂತ ಬೌಂಡರಿಗಳನ್ನು ಬಡಿಯುವ ಮೂಲಕ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅಜಿಂಕ್ಯ ರಹಾನೆ ಕೂಡ 67 ರನ್​​ಗಳ ಕೊಡುಗೆ ನೀಡಿದರು.

ಭಾರತ ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡು 300 ರನ್​ ಪೇರಿಸಿದೆ. ಎರಡನೇ ದಿನಕ್ಕೂ ಬ್ಯಾಟಿಂಗ್​ ಕಾಯ್ದುಕೊಂಡಿದೆ. ರಿಷಭ್ ಪಂತ್​ (33) ಮತ್ತು ಅಕ್ಷರ್ ಪಟೇಲ್ (5)​ ಕ್ರೀಸ್​ನಲ್ಲಿದ್ದಾರೆ.

ABOUT THE AUTHOR

...view details