ಅಹಮದಾಬಾದ್: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನ ನಾಲ್ಕನೇ ಟೆಸ್ಟ್ನಿಂದ ಏಕೆ ಕೈ ಬಿಡಲಾಯಿತು ಎಂಬುದನ್ನ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.
ಬಲ ಮೊಣಕೈಗೆ ಗಾಯದಿಂದಾಗಿ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಆರ್ಚರ್ ಅವರನ್ನ ಪ್ಲೇಯಿಂಗ್ ಇಲೆವೆನ್ ನಿಂದ ಕೈ ಬಿಡಲಾಯಿತು ಎಂದು ಇಸಿಬಿ ಸ್ಪಷ್ಟನೆ ನೀಡಿದೆ.
"ಜೋಫ್ರಾ ಆರ್ಚರ್ ಅವರ ಬಲ ಮೊಣಕೈ ಸಮಸ್ಯೆಯಿಂದಾಗಿ ಈ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಇಸಿಬಿ ವೈದ್ಯಕೀಯ ತಂಡವು ಈ ಬಗ್ಗೆ ಸರಿಯಾದ ಸ್ಪಷ್ಟನೆ ನೀಡುತ್ತಿದೆ" ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಆಲ್ರೌಂಡರ್ ಬೆನ್ ಸ್ಟೋಕ್ಸ್ ಹೊಟ್ಟೆಯ ನೋವು ಕಾಣಿಸಿಕೊಂಡಿತ್ತು. ಆದರೆ, ಅವರನ್ನು ತಂಡದಿಂದ ಕೈ ಬಿಟ್ಟರೆ ತಂಡದ ಇತರ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಅವರನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಸೇರಿಸಲಾಯಿತು ಎಂದು ಇಸಿಬಿ ತಿಳಿಸಿದೆ.