ಕರ್ನಾಟಕ

karnataka

ETV Bharat / sports

ಭಾರತದ ವಿರುದ್ಧ ಕಳಪೆ ಪ್ರದರ್ಶನ.. ಏಕದಿನ ಕ್ರಿಕೆಟ್​​ಗೆ ದಿಢೀರ್ ನಿವೃತ್ತಿ ಘೋಷಿಸಿದ ಬೆನ್​ ಸ್ಟೋಕ್ಸ್​​ - ಬೆನ್​ ಸ್ಟೋಕ್ಸ್ ನಿವೃತ್ತಿ

ಇಂಗ್ಲೆಂಡ್​ ಕ್ರಿಕೆಟ್ ತಂಡದ ಆಲ್​ರೌಂಡರ್ ಬೆನ್​​ ಸ್ಟೋಕ್ಸ್​​ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ.

Ben Stokes retires from ODI cricket
Ben Stokes retires from ODI cricket

By

Published : Jul 18, 2022, 5:37 PM IST

Updated : Jul 18, 2022, 5:47 PM IST

ಯುಕೆ(ಇಂಗ್ಲೆಂಡ್​):ಭಾರತದ ವಿರುದ್ಧ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಇಂಗ್ಲೆಂಡ್​ ಟೆಸ್ಟ್ ಕ್ಯಾಪ್ಟನ್​, ಆಲ್​ರೌಂಡರ್ ಬೆನ್​​ಸ್ಟೋಕ್ಸ್​​ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಾಳೆ ನಡೆಯಲಿರುವ ಏಕದಿನ ಕ್ರಿಕೆಟ್​ ಅವರ ಪಾಲಿಗೆ ಕೊನೆಯ ಪಂದ್ಯವಾಗಲಿದೆ. ಇದಾದ ಬಳಿಕ ಅವರು ಏಕದಿನ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಳ್ಳಲಿದ್ದಾರೆ.

ಜೋ ರೂಟ್​​ ರಾಜೀನಾಮೆಯಿಂದ ತೆರವಾಗಿದ್ದ ಇಂಗ್ಲೆಂಡ್​ ಟೆಸ್ಟ್ ತಂಡದ ನಾಯಕನಾಗಿ ಕಳೆದ ಕೆಲ ತಿಂಗಳ ಹಿಂದೆ ಸ್ಟೋಕ್ಸ್ ನೇಮಕಗೊಂಡಿದ್ದಾರೆ. ಆದರೆ, ಇದೀಗ ದಿಢೀರ್ ಆಗಿ ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಭಾರತದ ವಿರುದ್ಧ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಬೆನ್​ ಸ್ಟೋಕ್ಸ್ ಕೇವಲ 48ರನ್​​ಗಳಿಕೆ ಮಾಡಿದ್ದು, ಯಾವುದೇ ವಿಕೆಟ್ ಪಡೆದುಕೊಂಡಿಲ್ಲ.

31 ವರ್ಷದ ಬೆನ್​​ಸ್ಟೋಕ್ಸ್​​ 2019ರ ಐಸಿಸಿ ಏಕದಿನ ವಿಶ್ವಕಪ್​​ ಫೈನಲ್​ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದರ ಫಲವಾಗಿ ತಂಡ ಏಕದಿನ ವಿಶ್ವಕಪ್​​ಗೆ ಮುತ್ತಿಕ್ಕಿತ್ತು. ಜೊತೆಗೆ ಸ್ಟೋಕ್ಸ್​​​ ಪಂದ್ಯಶ್ರೇಷ್ಠ ಪ್ರಶಸ್ತಿ ಸಹ ಪಡೆದುಕೊಂಡಿದ್ದರು. ಇಂಗ್ಲೆಂಡ್ ಪರ 104 ಏಕದಿನ ಪಂದ್ಯಗಳನ್ನಾಡಿರುವ ಇವರು, 2919 ರನ್​​ಗಳಿಸಿದ್ದು, 74 ವಿಕೆಟ್ ಪಡೆದುಕೊಂಡಿದ್ದಾರೆ.

ಟೆಸ್ಟ್, ಟಿ-20 ಕ್ರಿಕೆಟ್​ನಲ್ಲಿ ಮುಂದುವರಿಕೆ:ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿರುವ ಸ್ಟೋಕ್ಸ್ ಇದೀಗ ಟೆಸ್ಟ್ ತಂಡದ ನಾಯಕನಾಗಿ ಮುಂದುವರೆಯಲಿದ್ದು, ಚುಟುಕು ಕ್ರಿಕೆಟ್​ನಲ್ಲೂ ಭಾಗಿಯಾಗಲಿದ್ದಾರೆ.

ಡರ್ಹಾಮ್​​ನಲ್ಲಿ ಇಂಗ್ಲೆಂಡ್​ ಪರ ಏಕದಿನ ಕ್ರಿಕೆಟ್​ನ ಕೊನೆಯ ಪಂದ್ಯವನ್ನ ಆಡುತ್ತಿದ್ದೇನೆ. ನಾನು ಈ ಸ್ವರೂಪದ(ಏಕದಿನ ಕ್ರಿಕೆಟ್​) ಕ್ರಿಕೆಟ್​​ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಈ ನಿರ್ಧಾರ ಕೈಗೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಸಹ ಆಟಗಾರರೊಂದಿಗೆ ಇಂಗ್ಲೆಂಡ್​ ಪರ ಆಡುವ ಪ್ರತಿ ಕ್ರಿಕೆಟ್​​ನ್ನು ಆನಂದಿಸಿದ್ದೇನೆ. ನನ್ನ ಪ್ರಯಾಣ ಸ್ಮರಣೀಯವಾಗಿತ್ತು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಶೇ. 100ರಷ್ಟು ಪ್ರದರ್ಶನ ನೀಡಲು ನನ್ನಿಂದ ಸಾಧ್ಯವಾಗಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Last Updated : Jul 18, 2022, 5:47 PM IST

ABOUT THE AUTHOR

...view details