ಪರ್ತ್, ಆಸ್ಟ್ರೇಲಿಯಾ:ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪಿದ್ದು, ಪರ್ತ್‌ನಲ್ಲಿ ಅಭ್ಯಾಸ ನಡೆಸಿದರು. ಮೈದಾನದಲ್ಲಿದ್ದ ಮಕ್ಕಳ ಪೈಕಿ 11 ವರ್ಷದ ಬಾಲಕನೊಬ್ಬ ತನ್ನ ಬೌಲಿಂಗ್ ಮೂಲಕ ಎಲ್ಲರ ಮನಸೆಳೆದಿದ್ದಾನೆ. ಭಾರತದ ನಾಯಕ ರೋಹಿತ್ ಶರ್ಮಾ ಅವರು ಉತ್ತಮ ಬೌಲಿಂಗ್ ಮಾಡುತ್ತಿದ್ದ ಎಡಗೈ ವೇಗದ ಪ್ರತಿಭೆಯಿಂದ ಇಂಪ್ರೆಸ್ ಆದರು. ಬಳಿಕ ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಆ ಬಾಲಕನಿಂದ ಬೌಲಿಂಗ್ ಮಾಡಿಸಿಕೊಂಡರು. ರೋಹಿತ್‌ಗೆ ಬೌಲಿಂಗ್ ಮಾಡುತ್ತಿರುವ ಬಾಲಕ ದೃಶಿಲ್ ಚೌಹಾಣ್ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ.
ನಾವು ಮಧ್ಯಾಹ್ನದ ಅಭ್ಯಾಸದ ಅವಧಿಗೆ ವಾಕಾಗೆ ಹೋಗಿದ್ದೆವು. ಅಲ್ಲಿ ಮಕ್ಕಳು ಬೆಳಗಿನ ಅವಧಿ ಮುಗಿಸುವುದರಲ್ಲಿ ನಿರತರಾಗಿದ್ದರು. ಡ್ರೆಸ್ಸಿಂಗ್ ರೂಮ್‌ನಿಂದ ಸುಮಾರು 100 ಮಕ್ಕಳು ಆಟವಾಡುವುದನ್ನು ನಾವು ನೋಡಿದ್ದೇವೆ. ಒಬ್ಬ ಹುಡುಗ (ದೃಶಿಲ್) ಎಲ್ಲರ ಗಮನ ಸೆಳೆದ. ಅದರಲ್ಲೂ ರೋಹಿತ್ ಅವರದ್ದು. ಅವರ ರನ್‌ಅಪ್ ಮತ್ತು ಸಹಜ ಪ್ರತಿಭೆ ಎಲ್ಲರನ್ನು ಅಚ್ಚರಿಗೆ ದೂಡಿತು. ಅವರು ಸ್ಥಿರವಾಗಿ ಬೌಲಿಂಗ್ ಮಾಡಿದರು. ರೋಹಿತ್ ಅವರ ಬಳಿ ಹೋಗಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವಂತೆ ಕೇಳಿಕೊಂಡರು ಅಂತಾ ಟೀಂ ಇಂಡಿಯಾ ವಿಶ್ಲೇಷಕ ಪ್ರಸಾದ್ ಮೋಹನ್ ಹೇಳಿದ್ದಾರೆ.