ಅಡಿಲೇಡ್ :ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವವನ್ನು ಪ್ರಶಂಸಿಸಿರುವ ಭಾರತದ ಮಾಜಿ ಕೋಚ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೇಗ್ ಚಾಪೆಲ್, ತಾವು ತಮ್ಮ ಕ್ರಿಕೆಟ್ ಜೀವನದಲ್ಲಿ ಕಂಡಂತಹ ತೀಕ್ಷ್ಣ ಕ್ರಿಕೆಟ್ ಮೆದುಳನ್ನು ಹೊಂದಿರುವ ಕ್ರಿಕೆಟಿಗರಲ್ಲಿ ಅವರೂ ಒಬ್ಬರು ಎಂದು ತಿಳಿಸಿದ್ದಾರೆ.
"ಭಾರತೀಯ ಉಪಖಂಡದಲ್ಲಿ ಈಗಲೂ ಉತ್ತಮ ಕೋಚಿಂಗ್ ಸೌಲಭ್ಯ ಸಮರ್ಪಕವಾಗಿಲ್ಲದ ಅನೇಕ ಪಟ್ಟಣಗಳನ್ನು ಹೊಂದಿದೆ. ಅಲ್ಲಿನ ಯುವಕರು ಔಪಚಾರಿಕ ತರಬೇತಿಯ ಹಸ್ತಕ್ಷೇಪವಿಲ್ಲದೆ ಬೀದಿಗಳಲ್ಲಿ ಮತ್ತು ಖಾಲಿ ಭೂಮಿಯಲ್ಲಿ ಕ್ರಿಕೆಟ್ ಆಡುತ್ತಾರೆ.
ಪ್ರಸ್ತುತ ಸ್ಟಾರ್ ಆಟಗಾರರು ಕೂಡ ಈ ಆಟವನ್ನು ಅಲ್ಲೆ ಕಲಿತಿದ್ದಾರೆ" ಎಂದು ಇಎಸ್ಪಿನ್ ಕ್ರಿಕ್ಇನ್ಫೋಗೆ ಬರೆದಿರುವ ಅಂಕಣದಲ್ಲಿ ಚಾಪೆಲ್ ತಿಳಿಸಿದ್ದಾರೆ. ನೈಸರ್ಗಿಕವಾಗಿ ಬ್ಯಾಟಿಂಗ್ ಕಲಿತಿರುವ ಧೋನಿಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡಿರುವ ಅವರು, ನಾನು ಭಾರತದಲ್ಲಿ ಎಂಎಸ್ ಧೋನಿ ಜೊತೆಗೆ ಕೆಲಸ ಮಾಡಿದ್ದೇನೆ. ಆತ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಂಡ ಮತ್ತು ಈ ಶೈಲಿಯಲ್ಲಿ ಆಡಲು ಕಲಿತ ಬ್ಯಾಟರ್ಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.
ಇದನ್ನೂ ಓದಿ:ಐಸಿಸಿ ಏಕದಿನ ರ‍್ಯಾಂಕಿಂಗ್ : 2ನೇ ಸ್ಥಾನದಲ್ಲೇ ಉಳಿದ ಕೊಹ್ಲಿ, ಡಿಕಾಕ್, ಡಸೆನ್ ಗಮನಾರ್ಹ ಏರಿಕ
ಅವರು ತನ್ನ ಬೆಳವಣಿಗೆಯ ಆರಂಭದಲ್ಲಿ ವಿವಿಧ ಸಂದರ್ಭಗಳಲ್ಲಿ ಹೆಚ್ಚು ಅನುಭವಿ ವ್ಯಕ್ತಿಗಳ ವಿರುದ್ಧ ಸ್ಪರ್ಧಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳುವ ಮತ್ತು ಕಾರ್ಯತಂತ್ರದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡರು. ಅವರ ಆ ಕೌಶಲ್ಯ ಅನೇಕ ಸಮಕಾಲೀನ ಕ್ರಿಕೆಟಿಗರಿಂದ ಅವರನ್ನು ಪ್ರತ್ಯೇಕಿಸಿದೆ. ನಾನು ನನ್ನ ಕ್ರಿಕೆಟ್ ಜೀವನದಲ್ಲಿ ಎದುರಿಸಿದ ತೀಕ್ಷ್ಣವಾದ ಕ್ರಿಕೆಟ್ ಮೆದುಳುಗಳನ್ನು ಹೊಂದಿರುವವರಲ್ಲಿ ಅವರೂ ಒಬ್ಬರು ಎಂದು ಆಸೀಸ್ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಚಾಪೆಲ್ ಹೇಳಿದ್ದಾರೆ.
ಗ್ರೇಗ್ ಚಾಪೆಲ್ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಎಂಎಸ್ ಧೋನಿ 2020 ಆಗಸ್ಟ್ 15ರಂದು ನಿವೃತ್ತಿ ಘೋಷಿಸುವ ವೇಳೆಗೆ ಭಾರತದ ಶ್ರೇಷ್ಠ ನಾಯಕನಾಗಿ ಗುರುತಿಸಿಕೊಂಡರು. ವಿಶ್ವದ ಶ್ರೇಷ್ಠ ಫಿನಿಷರ್ ಎನಿಸಿಕೊಂಡಿರುವ ಅವರು 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯಗಳಿಂದ 17 ಸಾವಿರಕ್ಕೂ ಹೆಚ್ಚು ರನ್ಳಿಸಿದ್ದಾರೆ. ಐಸಿಸಿ ಆಯೋಜಿಸುವ ಎಲ್ಲಾ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎನಿಸಿಕೊಂಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ