ಶಾರ್ಜಾ:ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿ ಟಲ್ಸ್ ತಂಡ ಮುಂಬೈ ವಿರುದ್ದ ಟಾಸ್ ಗೆದ್ದ ಬೌಲಿಂಗ್ ಮಾಡಲು ನಿರ್ಧರಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ. ಆದರೆ ಅಗ್ರ ಎರಡು ಸ್ಥಾನ ಪಡೆಯಲಷ್ಟೇ ಪೈಪೋಟಿ ಈ ಪಂದ್ಯವನ್ನು ಗೆಲ್ಲಲು ಆಡಲಿದೆ. ಮೊದಲೆರಡು ಸ್ಥಾನ ಪಡೆದರೆ ಮೊದಲ ಕ್ವಾಲಿಫೈಯರ್ನಲ್ಲಿ ಸೋತರೂ ಮತ್ತೊಂದು ಅವಕಾಶ ಸಿಗಲಿದೆ. ಈ ಪಂದ್ಯದಲ್ಲಿ ಲಲಿತ್ ಯಾದವ್ ಬದಲಿಗೆ ಗಾಯದಿಂದ ಚೇತರಿಸಿಕೊಂಡಿರುವ ಪೃಥ್ವಿ ಶಾ ಕಮ್ಬ್ಯಾಕ್ ಮಾಡಿದ್ದಾರೆ.
ಇತ್ತ ಮುಂಬೈ ಇಂಡಿಯನ್ಸ್ 11 ಪಂದ್ಯಗಳಲ್ಲಿ 5 ಗೆಲುವು ಮತ್ತು 6 ಸೋಲು ಕಂಡು 10 ಅಂಕಗಳನ್ನು ಹೊಂದಿದೆ. ಪಂಜಾಬ್, ಕೆಕೆಆರ್ ತಂಡಗಳೂ ಇಷ್ಟೇ ಪಂದ್ಯಗಳನ್ನಾಡಿ ಇಷ್ಟೇ ಅಂಕಗಳನ್ನು ಹೊಂದಿರುವುದರಿಂದ ರೋಹಿತ್ ಪಡೆ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಿದೆ.
ಮುಖಾಮುಖಿ:
ಇಡೀ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ರಬಲ ಪೈಪೋಟಿ ನೀಡಿರುವ ತಂಡವೆಂದರೆ ಡೆಲ್ಲಿ. ಎರಡೂ ತಂಡಗಳು 29 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 16 ಮತ್ತು ಡೆಲ್ಲಿ 13 ಬಾರಿ ಜಯ ಸಾಧಿಸಿದೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಆಡಿದ ಎಲ್ಲಾ 4 ಪಂದ್ಯಗಳಲ್ಲೂ ಮುಂಬೈ ವಿರುದ್ಧ ಸೋಲು ಕಂಡಿತ್ತು.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್,ಸ್ಟೀವ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ/ವಿಕೀ), ಶಿಮ್ರಾನ್ ಹೆಟ್ಮಾಯಿರ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಕಗಿಸೊ ರಬಾಡಾ, ಎನ್ರಿಚ್ ನಾರ್ಟ್ಜ್, ಆವೇಶ್ ಖಾನ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿ.ಕೀ), ಸೂರ್ಯಕುಮಾರ್ ಯಾದವ್ , ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನೇಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ಇದನ್ನು ಓದಿ:ನಾಯಕ ರಾಹುಲ್ಲೊಂದಿಗಿನ ಜೊತೆಯಾಟವೇ ಗೆಲುವಿಗೆ ಕಾರಣ: ಮಯಾಂಕ್ ಅಗರ್ವಾಲ್