ನವದೆಹಲಿ :ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ 2 ಪಂದ್ಯಗಳಿಗೆ ಡೆಲ್ಲಿ ಆತಿಥ್ಯವಹಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಫೈನಲ್ ಪಂದ್ಯ ನವೀಕೃತ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಶುಕ್ರವಾರ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳುವುದಕ್ಕೆ ವೀಸಾ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿರುವ ಬಿಸಿಸಿಐ, ಪಾಕಿಸ್ತಾನದ ಪಂದ್ಯಗಳನ್ನು ಎಲ್ಲಿ ಆಯೋಜನೆಯ ಬಗೆಗೆನ ಖಚಿತ ಮಾಹಿತಿ ಇನ್ನಷ್ಟೇ ಘೋಷಿಸಿಬೇಕಿದೆ.
ಆದರೆ, ಈ ವಿಶ್ವಕಪ್ಗೆ ಪಾಕಿಸ್ತಾನ ಪಾಲ್ಗೊಳ್ಳುವ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಯಾಕೆಂದರೆ, ಪಿಸಿಬಿ ಕೇವಲ ಆಟಗಾರರ ಮತ್ತು ಸಿಬ್ಬಂದಿ ಇಲ್ಲದೆ, ಮಾಧ್ಯಮದವರಿಗೂ ವೀಸಾ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದೆ.