ಕರ್ನಾಟಕ

karnataka

ETV Bharat / sports

ಡೆಲ್ಲಿಗೆ ರಿಷಬ್ ಪಂತ್ ಬದಲಿಗೆ ಇವರು.. ಬ್ಯಾಟಿಂಗ್​, ಕೀಪಿಂಗ್​ ಮಾಡಬಲ್ಲ ಮುಂದಿನ ಇಂಡಿಯನ್​ ಸ್ಟಾರ್ - ಈಟಿವಿ ಭಾರತ ಕರ್ನಾಟಕ

ರಿಷಬ್ ಪಂತ್ ಬದಲಿಗೆ ದೇಶೀಯ ಕ್ರೀಡೆಯಲ್ಲಿ ಉತ್ತಮ ಅಂಕಿ-ಅಂಶ ಹೊಂದಿರುವ ವಿಕೆಟ್​ ಕೀಪರ್​ನ್ನು ಕಂ ಬ್ಯಾಟರ್​ನ್ನು ಡೆಲ್ಲಿ ತೆಗೆದುಕೊಂಡಿದೆ.

Delhi Capitals Abhishek Porel replacement for as Rishab Pant IPL 2023
ಡೆಲ್ಲಿಗೆ ರಿಷಬ್ ಪಂತ್ ಬದಲಿಗೆ ಇವರು.. ಬ್ಯಾಟಿಂಗ್​, ಕೀಪಿಂಗ್​ ಮಾಡಬಲ್ಲ ಈತ ಮುಂದಿನ ಇಂಡಿಯನ್​ ಸ್ಟಾರ್​!

By

Published : Mar 29, 2023, 5:52 PM IST

ನವದೆಹಲಿ:ಮಿಲಿಯನ್​ ಡಾಲರ್​ ಚುಟುಕು ಕ್ರಿಕೆಟ್​ಗೆ ಇನ್ನೇನು ಎರಡೇ ದಿನ ಬಾಕಿ ಇದೆ. ಎರಡು ತಿಂಗಳ ಕಾಲ ನಡೆಯುವ ಐಪಿಎಲ್​ಗೆ ಬಹುತೇಕ ತಂಡಗಳು ಒಗ್ಗೂಡಿದ್ದು, ಅಭ್ಯಾಸದಲ್ಲಿ ತೊಡಗಿವೆ. ಈ ವರ್ಷದ ಇಂಡಿಯನ್​​ ಪ್ರೀಮಿಯರ್​ ಲೀಗ್​ಗೆ ಗಾಯಾಳುಗಳ ಸಮಸ್ಯೆ ಕಾಡಿದೆ. ಇದರಿಂದಾಗಿ ಬಹುತೇಕ ತಂಡಗಳು ಸ್ಟಾರ್​ ಆಟಗಾರರನ್ನು ಕಳೆದಿಕೊಂಡಿವೆ.

ಮುಂಬರುವ ಐಪಿಎಲ್ 2023ಕ್ಕೆ ಗಾಯಗೊಂಡಿರುವ ರಿಷಬ್ ಪಂತ್ ಬದಲಿಗೆ ಬಂಗಾಳದ ವಿಕೆಟ್ ಕೀಪರ್ ಬ್ಯಾಟರ್ ಅಭಿಷೇಕ್ ಪೊರೆಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಫ್ರ್ಯಾಂಚೈಸ್‌ನ ವಾರದ ಅವಧಿಯ ಪೂರ್ವಸಿದ್ಧತಾ ಶಿಬಿರದಲ್ಲಿ ಅಭ್ಯಾಸ ಆಟದ ನಂತರ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪೊರೆಲ್ ಹೊರತುಪಡಿಸಿ, ಶೆಲ್ಡನ್ ಜಾಕ್ಸನ್, ಲುವ್ನಿತ್ ಸಿಸೋಡಿಯಾ ಮತ್ತು ವಿವೇಕ್ ಸಿಂಗ್ ಎಂಬ ಮೂವರು ಅನ್‌ಕ್ಯಾಪ್ಡ್ ವಿಕೆಟ್‌ ಕೀಪರ್‌ಗಳು ತಂಡದಲ್ಲಿದ್ದಾರೆ. ಅವರು ಈಗಾಗಲೇ ಅಭ್ಯಾಸದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಮತ್ತು ಮುಖ್ಯ ಕೋಚ್ ರಿಕಿ ನೇತೃತ್ವದ ಕೋಚಿಂಗ್ ಗ್ರೂಪ್‌ನಿಂದ ಮೇಲ್ವಿಚಾರಣೆ ಮಾಡಲಾಗಿದೆ.

ಅಂತಿಮವಾಗಿ, ಕ್ಯಾಪಿಟಲ್ಸ್ ಪೋರೆಲ್ ಅವರೊಂದಿಗೆ ಮುಂದುವರಿಯಲು ನಿರ್ಧರಿಸಿದೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳದೊಂದಿಗಿನ ಅವರು ಆಡಿದ ಅನುಭವ ಹೊಂದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರ ಮೂರು ಸ್ಟಂಪ್​ ವಿಕೆಟ್​ ಪಡೆದಿದ್ದು ಕೇವಲ 22 ರನ್‌ಗಳನ್ನು ಗಳಿಸಿದ್ದಾರೆ. ಈ ಸೀಸನ್​ ಅವರಿಂದ ಉತ್ತಮ ಪ್ರದರ್ಶನ ಕಂಡುಬಂದಿಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬ್ಯಾಟರ್ ಸ್ವಲ್ಪ ಉತ್ತಮ ಅಂಕಿ-ಅಂಶವನ್ನು ಹೊಂದಿದ್ದಾರೆ. 26 ಇನ್ನಿಂಗ್ಸ್‌ಗಳಲ್ಲಿ ಆರು ಅರ್ಧ ಶತಕಗಳನ್ನು ಗಳಿಸಿದ್ದು, 73 ಅತ್ಯುತ್ತಮ ರನ್‌ ಗಳಿಕೆಯಾಗಿದೆ.

ಪಂತ್ ಅವರ ಬದಲಿಯಾಗಿ ಪೊರೆಲ್ ಬಂದರೂ, ಐಪಿಎಲ್ 2022ರಲ್ಲಿ ಆರು ಪಂದ್ಯಗಳಲ್ಲಿ ಕಾಣಿಸಿಕೊಂಡು 91 ರನ್​ ಗಳಿಸಿರು ಸರ್ಫರಾಜ್ ಖಾನ್ ಅವರು ಈ ವರ್ಷದ ಆವೃತ್ತಿಯಲ್ಲಿ ಗೌಲ್ಸ್​ ತೋಡುವ ಸಾಧ್ಯತೆ ಇದೆ. ಕಳೆದ ಆವೃತ್ತಿಯಲ್ಲಿ ಸರ್ಫರಾಜ್ ಖಾನ್ ಅವರ ಬ್ಯಾಟ್​ನಿಂದ 36 ಅತಿ ಗರಿಷ್ಠ ರನ್​ ಗಳಿಕೆಯಾಗಿತ್ತು.

ಕಳೆದ ಮೂರು ದೇಶೀಯ ಕ್ರಿಕೆಟ್ ಟೂರ್ನಮೆಂಟ್​ಗಳಲ್ಲಿ ಉತ್ತಮ ರನ್​ ಗಳಿಸಿದ ಸರ್ಫರಾಜ್ ಖಾನ್​ಗೆ ಈ ಬಾರಿ ಹೆಚ್ಚು ಆದ್ಯತೆ ನೀಡುವ ಲಕ್ಷಣಗಳಿವೆ. ಡಿಸೆಂಬರ್‌ 30, 2022ರಂದು ದೆಹಲಿಯಿಂದ ಮನೆಗೆ ಮರಳುತ್ತಿರುವಾಗ ಅಪಘಾತಕ್ಕೆ ಪಂತ್​ ಒಳಗಾಗಿದ್ದರು. ಅವರು ಈ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿದಿರುವುದರಿಂದ ಅವರ ಜಾಗಕ್ಕೆ ಸೂಕ್ತ ಹೊಡಿಬಡಿ ಆಟಗಾರನನ್ನು ಫ್ರಾಂಚೈಸಿ ಹುಡುಕುತ್ತಿದೆ.

25ರ ಹರೆಯದ ಸರ್ಫರಾಜ್ ಖಾನ್​ ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಮುಂಬೈ ಪರ ವಿಕೆಟ್ ಕೀಪರ್ ಕಂ ಬ್ಯಾಟರ್ ಆಗಿ ಆಡಿದ್ದರು. ಈ ವರ್ಷದ ಹರಾಜಿನಲ್ಲಿ ತಮ್ಮ ಮೂಲ ಬೆಲೆ 2 ಕೋಟಿಗೆ ತಂಡಕ್ಕೆ ಸೇರ್ಪಡೆಯಾದರು. ಏಪ್ರಿಲ್ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ:ಧೋನಿ ಐಪಿಎಲ್​ ನಿವೃತ್ತಿ ಬಗ್ಗೆ ಕಳೆದ ಕೆಲ ವರ್ಷಗಳಿಂದ ಮಾತುಗಳು ಕೇಳಿಬರುತ್ತಿವೆ: ರೋಹಿತ್​ ಶರ್ಮಾ

ABOUT THE AUTHOR

...view details