ನವದೆಹಲಿ :ಟೀಂ ಇಂಡಿಯಾ ಸೀಮಿತ ಓವರ್ಗಳ ಕ್ರಿಕೆಟ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ಕುರಿತು ವೆಸ್ಟ್ ಇಂಡೀಸ್ ಮಾಜಿ ಕ್ಯಾಪ್ಟನ್ ಡರೇನ್ ಸಾಮಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ರೋಹಿತ್ ಶರ್ಮಾ ಓರ್ವ ಪ್ರೇರಕ ನಾಯಕ ಎಂದಿರುವ ಅವರು, ಟೀಂ ಇಂಡಿಯಾ ಹಿಟ್ಮ್ಯಾನ್ ಕೈಯಲ್ಲಿ ಉತ್ತಮ ಸ್ಥಿತಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಸಾಮಿ ಮಾತು ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೂ ಮುನ್ನ ಮಾತನಾಡಿರುವ ಡರೇನ್ ಸಾಮಿ, ರೋಹಿತ್ ಶರ್ಮಾ ಅವರ ನಾಯಕತ್ವದ ಶೈಲಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಗುಣಗಳಿವೆ ಎಂದಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ಉತ್ತಮ ಸ್ಥಿತಿಯಲ್ಲಿರಲಿದೆ ಎಂದು ಸಾಮಿ ಅಭಿಪ್ರಾಯಪಟ್ಟಿದ್ದು, ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆಂದು ತಿಳಿಸಿದ್ದಾರೆ.
ರೋಹಿತ್ ಅತ್ಯುತ್ತಮ ನಾಯಕ, ಉತ್ತಮ ಪ್ರೇರಕ, ಐಪಿಎಲ್ನಲ್ಲಿ ಮುಂಬೈ ತಂಡದಲ್ಲಿದ್ದಾಗ ನಾನು ಅವರನ್ನ ನೋಡಿದ್ದೇನೆ. ಅವರ ಬಳಿ ಎಂಎಸ್ ಧೋನಿ, ಗೌತಮ್ ಗಂಭೀರ್ ಅವರಂತೆ ಉತ್ತಮ ನಾಯಕತ್ವದ ಕೌಶಲ್ಯಗಳಿವೆ ಎಂದಿದ್ದಾರೆ.
ಇದನ್ನೂ ಓದಿರಿ:ಬ್ರೆಂಡನ್ ಟೇಲರ್ ಮೇಲೆ ಮೂರೂವರೆ ವರ್ಷ ನಿಷೇಧ ಹೇರಿದ ಐಸಿಸಿ
ಇಂಡಿಯನ್ ಪ್ರೀಮಿಯರ್ ಲೀಘ್ನಲ್ಲಿ ಐದು ಸಲ ತಂಡಕ್ಕೆ ಟ್ರೋಫಿ ತಂದುಕೊಟ್ಟಿರುವ ರೋಹಿತ್ ಶರ್ಮಾ ಇದೀಗ ಫೆ. 6ರಿಂದ ಅಹ್ಮದಾಬಾದ್ನಲ್ಲಿ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ODI ಮತ್ತು T20 ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಲಿದ್ದಾರೆ.
ವಿರಾಟ್ ಕೊಹ್ಲಿ ಅವರನ್ನ ಏಕದಿನ ನಾಯಕತ್ವದಿಂದ ಕೆಳಗಿಳಿಸುತ್ತಿದ್ದಂತೆ ರೋಹಿತ್ ಶರ್ಮಾ ಆ ಸ್ಥಾನಕ್ಕೆ ಆಯ್ಕೆಯಾಗಿದ್ದು, ಇದೇ ಮೊದಲ ಸಲ ಪೂರ್ಣ ಪ್ರಮಾಣದ ನಾಯಕನಾಗಿ ತಂಡ ಮುನ್ನಡೆಸಲಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ