ಕರ್ನಾಟಕ

karnataka

ETV Bharat / sports

ವಿಶ್ವಕಪ್​ 2023: ತಿರುವನಂತಪುರಂ ಹೆಸರನ್ನು ದಕ್ಷಿಣ ಆಫ್ರಿಕಾ ಆಟಗಾರರು ಹೇಗೆಲ್ಲ ಉಚ್ಚರಿಸಿದ್ದಾರೆ ನೋಡಿ..

ದಕ್ಷಿಣ ಆಫ್ರಿಕಾ ಆಟಗಾರರು ತಿರುವನಂತಪುರಂ ಹೆಸರನ್ನು ಹೇಗೆಲ್ಲ ಉಚ್ಚಾರಣೆ ಮಾಡಿದ್ದಾರೆ ನೀವೇ ನೋಡಿ.

ದಕ್ಷಿಣ ಆಫ್ರಿಕಾ ಆಟಗಾರರು
ದಕ್ಷಿಣ ಆಫ್ರಿಕಾ ಆಟಗಾರರು

By ETV Bharat Karnataka Team

Published : Oct 2, 2023, 7:25 AM IST

Updated : Oct 2, 2023, 7:37 AM IST

ಹೈದರಾಬಾದ್​:ವಿಶ್ವದ ಕ್ರಿಕೆಟ್​ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿರುವ ಏಕದಿನ ವಿಶ್ವಕಪ್​ ಸರಣಿ ಅಕ್ಟೋಬರ್​ 5 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ವಿಶ್ವಕಪ್​ ಸರಣಿಯಲ್ಲಿ ಭಾಗಿಯಾಗಲಿರುವ ಎಲ್ಲ 10 ತಂಡಗಳು ಭಾರತಕ್ಕೆ ಬಂದಿಳಿದಿದ್ದು, ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಇಂದು ನ್ಯೂಜಿಲ್ಯಾಂಡ್​ ಮತ್ತು ಸೌತ್​ ಆಫ್ರಿಕಾ ನಡುವಿನ ಅಭ್ಯಾಸ ಪಂದ್ಯ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ನಡೆಯುತ್ತಿದೆ. ಇದಕ್ಕಾಗಿ ತಂಡದ ಆಟಗಾರರು ತಿರುವನಂತಪುರಂಗೆ ಆಗಮಿಸಿದ್ದಾರೆ. ಇದರ ನಡುವೆಯೇ ದಕ್ಷಿಣ ಆಫ್ರಿಕಾ ಆಟಗಾರರು ತಿರುವನಂತಪುರಂ ಉಚ್ಚಾರಣೆಯನ್ನು ಭಿನ್ನ ವಿಭಿನ್ನವಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ವಿಡಿಯೋದಲ್ಲಿ 'ತಿರುವನಂತಪುರಂ' ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸಲು ಡೇವಿಡ್ ಮಿಲ್ಲರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮತ್ತು ಹೆನ್ರಿಚ್ ಕ್ಲಾಸೆನ್ ಬಾರಿ ಕಸರತ್ತು ಮಾಡಿದ್ದಾರೆ. ಅವರ ತಿರುವನಂತಪುರಂನ ಉಚ್ಛಾರಣೆ ಕ್ರಿಕೆಟ್​ ಪ್ರೇಮಿಗಳನ್ನು ರಂಜಿಸಿವೆ. 'ತಿರುವರಪುತನಂ, ತಿರುಪುನವರ, ತಿರುವಂತಂಪಿತ್ರುಂ, ತಿರುಂಪುರಂಭಂ ಹೀಗೆ ಭಿನ್ನ ವಿಭಿನ್ನವಾಗಿ ಉಚ್ಚರಿಸಿದ್ದಾರೆ. ಈ ವಿಡಿಯೋವನ್ನು ತಿರುವನಂತಪುರಂನ ಸಂಸದರಾಗಿರುವ ಕಾಂಗ್ರೆಸ್​​ ನಾಯಕ ಶಶಿತರೂರ್​ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಆಟಗಾರರು ತಿರುವನಂತಪುರಂಗೆ ಆಗಮಿಸಿದ್ದಾರೆ. ಆದರೆ ಅವರು ಯಾವ ಊರಲ್ಲಿದ್ದಾರೆ ಎಂಬುದು ಹೇಳಬಹುದೇ ಎಂದು ಬರೆದು ವಿಡಿಯೋವನ್ನು ಶೇರ್​ ಮಾಡಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ದಕ್ಷಿಣ ಆಫ್ರಿಕಾದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇಂದು ನ್ಯೂಜಿಲ್ಯಾಂಡ್​ ವಿರುದ್ಧ ಅಭ್ಯಾಸ ಪಂದ್ಯ ನಡೆಯಲಿದೆ. ಇದು ಆ ತಂಡಗಳ ಅಂತಿಮ ಅಭ್ಯಾಸ ಪಂದ್ಯವಾಗಿದೆ. ಅಕ್ಟೋಬರ್ 7 ರಿಂದ ದಕ್ಷಿಣ ಆಫ್ರಿಕಾದ ವಿಶ್ವಕಪ್​ ಅಭಿಯಾನ ಆರಂಭಗೊಳ್ಳಲಿದೆ. ತೆಂಬಾ ಬವುಮಾ ನೇತೃತ್ವದ ತಂಡ ಶ್ರೀಲಂಕಾ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೆಣಸಲಿದೆ.

ಬಲಿಷ್ಠ ತಂಡಗಳಾಗಿರುವ ನ್ಯೂಜಿಲ್ಯಾಂಡ್​​ ಮತ್ತು ಸೌತ್​ ಆಫ್ರಿಕಾ ಈ ವರೆಗೂ ವಿಶ್ವಕಪ್​ಗಳನ್ನು ಗೆದ್ದಿಲ್ಲ. 1992 ವಿಶ್ವಕಪ್ ಸರಣಿಯಲ್ಲಿ ಸೆಮಿ-ಫೈನಲ್‌ ಹಂತಕ್ಕೆ ತಲುಪಿದ್ದ ದಕ್ಷಿಣ ಆಫ್ರಿಕಾ ಡಿಎಲ್​ಎಸ್​ ನಿಯಮದಿಂದ ಪರಾಜಯಗೊಂಡಿತ್ತು. 1996 ರಲ್ಲಿ ಕ್ವಾರ್ಟರ್-ಫೈನಲ್‌ನಲ್ಲಿ ಕೂಡಾ ಸೋಲನುಭವಿಸಿತ್ತು. 1999ರಲ್ಲಿ ಸೆಮಿ-ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. 2007 ಮತ್ತು 2011 ಮತ್ತು 2015 ರ ಆವೃತ್ತಿಗಳಲ್ಲಿ ಕ್ರಮವಾಗಿ ಕ್ವಾರ್ಟರ್ ಫೈನಲ್ ಮತ್ತು ಸೆಮಿ-ಫೈನಲ್​ ಹಂತದ ವರೆಗೂ ಆಗಮಿಸಿರುವ ಸೌತ್​ ಆಫ್ರಿಕಾ ಕೊನೆಯ ಹಂತದಲ್ಲಿ ಸರಣಿಯಿಂದ ಹೊರ ಬೀಳುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಈ ಎರಡು ತಂಡಗಳು ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಪ್ರಬಲ ಪೈಪೋಟಿ ನೀಡಲಿವೆ.

ಇದನ್ನೂ ಓದಿ:ಶೂನ್ಯದಿಂದ ಸ್ಟಾರ್​ ಪಟ್ಟ! ಟೀಂ ಇಂಡಿಯಾ ವೇಗದ ಬೌಲರ್ ಮಹಮ್ಮದ್​ ಸಿರಾಜ್ ರೋಚಕ ಕಹಾನಿ

Last Updated : Oct 2, 2023, 7:37 AM IST

ABOUT THE AUTHOR

...view details