ಚೆನ್ನೈ (ತಮಿಳುನಾಡು): ಕ್ರಿಕೆಟ್ನಲ್ಲಿ ಮೊದಲು ಅಭಿಮಾನಿಗಳು ನೇರ ಮೈದಾನಕ್ಕೆ ಬರುವಂತಿತ್ತು. ನಂತರದ ದಿನಗಳಲ್ಲಿ ಆಟಗಾರರ ರಕ್ಷಣೆ ಹೆಚ್ಚಾಗಿದ್ದು, ಗ್ಯಾಲರಿಯನ್ನು ದಾಟಿ ಮೈದಾನಕ್ಕೆ ಬರುವುದು ಹರಸಾಹಸದ ಕೆಲಸವಾಗಿದೆ. ಪ್ರೇಕ್ಷಕರ ಗ್ಯಾಲರಿ ಮತ್ತು ಮೈದಾನದ ನಡುವೆ 10 ಅಡಿಗೂ ಎತ್ತರದ ಕಬ್ಬಿಣದ ಗ್ಯಾಲರಿಯನ್ನು ಹಾಕಲಾಗಿರುತ್ತದೆ. ಆದರೆ ಕ್ರಿಕೆಟ್ ಆಟಗಾರರ ಬಗೆಗಿನ ಹುಚ್ಚು ಪ್ರೀತಿಯಿಂದ ಕೆಲವೊಮ್ಮೆ ಈ ಕಬ್ಬಿಣದ ಕಂಬಿಗಳು ಅಭಿಮಾನಿಗಳಿಗೆ ಅಭೇದ್ಯವಾಗಿರುವುದಿಲ್ಲ. ಅದನ್ನು ದಾಟಿ ಮೈದಾನಕ್ಕೆ ಬಂದ ನಿದರ್ಶನಗಳೂ ತುಂಬಾ ಇವೆ.
ಅದರಲ್ಲಿ ಡೇನಿಯಲ್ ಜಾರ್ವಿಸ್ ಎಂಬಾತ ಮೈದಾನಕ್ಕೆ ಬರುವುದನ್ನೇ ಚಾಳಿಯಾಗಿ ಮಾಡಿಕೊಂಡಿದ್ದು ಆಗಾಗ ಮೈದಾನಕ್ಕೆ ಪ್ರವೇಶಿಸಿ ಆಟಗಾರರಿಗೆ ತೊಂದರೆ ಕೊಡುತ್ತಿರುತ್ತಾರೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ಚೆನ್ನೈನ ಎಂ ಎ ಚಿದಂಬರಮ್ ಕ್ರೀಡಾಂಗಣದಲ್ಲಿ ವಿಶ್ವಕಪ್ನ 5ನೇ ಪಂದ್ಯ ನಡೆಯುತ್ತಿದ್ದು, ಈ ವೇಳೆಯು ಮೈದಾನಕ್ಕಿಳಿದಿದ್ದಾನೆ.
ಜಾರ್ವೋ ಯಾರು?:ಜನಪ್ರಿಯ ಮತ್ತು ವಿವಾದಾತ್ಮಕ ಕುಚೇಷ್ಟೆಗಾರ ಡೇನಿಯಲ್ ಜಾರ್ವಿಸ್, ಜಾರ್ವೋ 69ನೇ ಬಾರಿ ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ಬಂದಿದ್ದಾನೆ. ಫೀಲ್ಡಿಂಗ್ ಮಾಡುತ್ತಿದ್ದ ಭಾರತೀಯ ಆಟಗಾರರ ಜೊತೆಗೆ ಜಾರ್ವೋ ಸೇರಿಕೊಂಡಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ಕಳಿಸಿದ್ದಾರೆ. ಆಗ ವಿರಾಟ್ ಕೊಹ್ಲಿ ಜಾರ್ವೋ ಬಳಿಗೆ ಬಂದು ಮಾತನಾಡಿಸಿ ಹೊರಗೆ ಹೋಗು ಎಂದು ಹೇಳಿದ್ದಾರೆ. ಇಂಗ್ಲೆಂಡ್ನ ಜಾರ್ವೋ bmwjarvo ಹೆಸರಿನ ತನ್ನ YouTube ಚಾನಲ್ ಮೂಲಕ ಹೆಸರುವಾಸಿಯಾಗಿದ್ದಾನೆ. ಅನೇಕ ಪಂದ್ಯಗಳಲ್ಲಿ ಈತ ಈ ರೀತಿಯ ಪ್ರ್ಯಾಂಕ್ ವಿಡಿಯೋಗಳನ್ನು ಮಾಡುತ್ತಾ ಫೇಮಸ್ ಆಗಿದ್ದಾನೆ.