ಕರ್ನಾಟಕ

karnataka

ETV Bharat / sports

ಅಚ್ಚರಿ..! ವಿಕೆಟ್​ಗೆ ಬಡಿದ ಚೆಂಡು ನೇರ ಸಿಕ್ಸರ್​ಗೆ! ... ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು.. - ಬಾಂಗ್ಲಾದೇಶ

ಆಂಗ್ಲರು ನೀಡಿದ್ದ 387 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಎರಡನೇ ಓವರ್​ನಲ್ಲಿ ಭರವಸೆಯ ಓಪನರ್ ಸೌಮ್ಯ ಸರ್ಕಾರ್ ಜೋಫ್ರಾ ಅರ್ಚರ್ ಎಸೆತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು.

ವಿಡಿಯೋ

By

Published : Jun 9, 2019, 11:13 AM IST

ಲಂಡನ್:ವಿಶ್ವಕಪ್​ ಟೂರ್ನಿ ಆರಂಭವಾಗಿ ಎರಡು ವಾರಗಳು ಕಳೆದಿದ್ದು ಮೈದಾನದಲ್ಲಿ ಹಲವು ಅಚ್ಚರಿಗಳು ನಡೆಯುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಶನಿವಾರದ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ.

ಆಂಗ್ಲರು ನೀಡಿದ್ದ 387 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಎರಡನೇ ಓವರ್​ನಲ್ಲಿ ಭರವಸೆಯ ಓಪನರ್ ಸೌಮ್ಯ ಸರ್ಕಾರ್ ಜೋಫ್ರಾ ಅರ್ಚರ್ ಎಸೆತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು.

ಭಾರತ ವಿರುದ್ಧ ಪಾಕ್ 'ವಿಶೇಷ ಸಂಭ್ರಮ'ಕ್ಕಿಲ್ಲ ಪ್ರಧಾನಿ ಅನುಮತಿ.. ಸರ್ಫರಾಜ್ ತಂಡಕ್ಕೆ ಪಂದ್ಯಕ್ಕೂ ಮುನ್ನವೇ ಮುಖಭಂಗ!

ಸೌಮ್ಯ ಸರ್ಕಾರ್ ಅವರ ಈ ವಿಕೆಟ್ ಪ್ರೇಕ್ಷಕರಿಗೆ ಅಚ್ಚರಿಯನ್ನುಂಟು ಮಾಡಿದೆ. ವೇಗಿ ಜೋಫ್ರಾ ಅರ್ಚರ್ ಎಸೆತ ಬ್ಯಾಟ್ಸ್​ಮನ್ ಕಣ್ತಪ್ಪಿಸಿ ವಿಕೆಟ್​ ಮೇಲ್ಭಾಗಕ್ಕೆ ಬಡಿದು ನೇರವಾಗಿ ಬೌಂಡರಿ ಗೆರೆಯಿಂದ ಹೊರಗೆ ಬಿದ್ದಿದೆ.

ವಿಶೇಷವೆಂದ ವೀಕ್ಷಕ ವಿವರಣೆ ನೀಡುತ್ತಿದ್ದ ನಾಸಿರ್ ಹುಸೇನ್ ಹಾಗೂ ಸೌರವ್ ಗಂಗೂಲಿ ಇಬ್ಬರೂ ಕೆಲ ನಿಮಿಷ ಇದನ್ನ ವಿವರಿಸಲಾಗದೆ ಮೌನ ವಹಿಸಿದರು.

ಭಾರತ V/s ಆಸ್ಟ್ರೇಲಿಯಾ.. ಬಲಿಷ್ಠ ತಂಡಗಳ ಹೋರಾಟದಲ್ಲಿ ರನ್​ಹೊಳೆ ನಿರೀಕ್ಷೆ..!

ಕೊನೇ ಕ್ಷಣದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಜೋಫ್ರಾ ಅರ್ಚರ್ ಆಯ್ಕೆಗಾರರ ನಂಬಿಕೆ ಉಳಿಸಿದ್ದಾರೆ. ಟೂರ್ನಿಯಲ್ಲಿ 153kph ವೇಗದಲ್ಲಿ ಬೌಲಿಂಗ್​ ಮಾಡಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ABOUT THE AUTHOR

...view details