ಹೈದರಾಬಾದ್: ಐಪಿಎಲ್ನಲ್ಲಿ ಅತ್ಯುತ್ತಮ ಹಾಗೂ ವಿಶ್ವಕಪ್ನಲ್ಲಿ ಸಮಾಧಾನಕರ ಪ್ರದರ್ಶನ ನೀಡಿದ ಅಫ್ಘಾನಿಸ್ತಾನದ ಯುವ ಕ್ರಿಕೆಟಿಗ ರಶೀದ್ ಖಾನ್‌ಗೆ ಇದೀಗ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ವಿಶ್ವಕಪ್ನಲ್ಲಿ ಅಫ್ಗನ್ ಹೀನಾಯ ಪ್ರದರ್ಶನ: ರಶೀದ್ ಖಾನ್‌ಗೆ ನಾಯಕತ್ವದ ಹೊಣೆ
ವಿಶ್ವಕಪ್ನಲ್ಲಿ ಗುಲ್ಬಾದಿನ್ ನೈಬ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಅಫ್ಘಾನ್ ತಂಡ ಒಂದೂ ಗೆಲುವು ಕಾಣದೆ ಟೂರ್ನಿ ಕೊನೆಗೊಳಿಸಿತ್ತು. ಇದು ಸಹಜವಾಗಿಯೇ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್(ಎಸಿಬಿ) ಕಣ್ಣು ಕೆಂಪಗಾಗಿಸಿದೆ.
ರಶೀದ್ ಖಾನ್
ವಿಶ್ವಕಪ್ನಲ್ಲಿ ಗುಲ್ಬಾದಿನ್ ನೈಬ್ ನಾಯಕತ್ವದಲ್ಲಿ ಹೋರಾಡಿದ ಅಫ್ಘಾನ್ ತಂಡ ಒಂದೇ ಒಂದು ಗೆಲುವನ್ನೂ ಕಾಣದೆ ಟೂರ್ನಿಯಿಂದ ಹೊರಬಿದ್ದಿತ್ತು. ತಂಡ ಕಳಪೆ ಪ್ರದರ್ಶನ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್(ಎಸಿಬಿ) ಅಸಮಾಧಾನಕ್ಕೆ ಕಾರಣವಾಗಿದೆ.
ವಿಶ್ವಕಪ್ ಟೂರ್ನಿಯ ಶೋಚನೀಯ ಪ್ರದರ್ಶನದ ಹಿನ್ನೆಲೆಯಲ್ಲಿ ಎಸಿಬಿ, ಗುಲ್ಬಾಡಿನ್ ನೈಬ್ರನ್ನು ನಾಯಕತ್ವದ ಹುದ್ದೆಯಿಂದ ಕೆಳಗಿಸಿದ್ದು, 20 ವರ್ಷದ ಯುವ ಆಲ್ರೌಂಡರ್ ರಶೀದ್ ಖಾನ್ರನ್ನು ಮೂರು ಮಾದರಿಗೂ ನಾಯಕನನ್ನಾಗಿ ನೇಮಿಸಲಾಗಿದೆ. ಅಸ್ಗರ್ ಅಫ್ಘಾನ್ ಉಪನಾಯಕರಾಗಿದ್ದಾರೆ.