ಕರ್ನಾಟಕ

karnataka

ETV Bharat / sports

ನ್ಯೂಜಿಲ್ಯಾಂಡ್ Vs ಪಾಕಿಸ್ತಾನ: ಸೋತರೆ ಸರ್ಫರಾಜ್​ ಪಡೆ ಟೂರ್ನಿಯಿಂದ ಔಟ್​! - ಪಾಕಿಸ್ತಾನ

ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ಉಳಿದೆಲ್ಲಾ ಪಂದ್ಯಗಳು ನಿರ್ಣಾಯಕವಾಗಿದ್ದು, ಒಂದು ಪಂದ್ಯ ಸೋತರೂ ಟೂರ್ನಿಯಿಂದ ನಿರ್ಗಮಿಸಬೇಕಿದೆ.

ಪಾಕಿಸ್ತಾನ

By

Published : Jun 26, 2019, 11:47 AM IST

ಬರ್ಮಿಂಗ್​ಹ್ಯಾಮ್:ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಸೆಮಿಫೈನಲ್‌​ ಕನಸನ್ನು ಜೀವಂತವಾಗಿರಿಸಿಕೊಂಡ ಪಾಕಿಸ್ತಾನ ಇಂದು ಟೂರ್ನಿಯಲ್ಲಿ ಸೋಲೇ ಕಾಣದ ನ್ಯೂಜಿಲ್ಯಾಂಡನ್ನು ಎದುರಿಸುತ್ತಿದೆ.

ಟೀಮ್ ಇಂಡಿಯಾ ವಿರುದ್ಧ ಮುಗ್ಗರಿಸಿದ ಬಳಿಕ ತೀವ್ರ ಟೀಕೆಗೊಳಗಾಗಿದ್ದ ಪಾಕಿಸ್ತಾನ ನಂತರ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಸೆಮೀಸ್​ ರೇಸ್​ನಲ್ಲಿ ಕಾಣಿಸಿಕೊಂಡಿತ್ತು. ಎರಡು ಗೆಲುವು ಹಾಗೂ ಮೂರು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಪಾಕಿಸ್ತಾನ, ಆಡಿರುವ ಐದೂ ಪಂದ್ಯ ಗೆದ್ದಿರುವ ನ್ಯೂಜಿಲ್ಯಾಂಡ್ ಇಂದಿನ ಪಂದ್ಯವನ್ನೂ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ಉಳಿದೆಲ್ಲಾ ಪಂದ್ಯಗಳು ನಿರ್ಣಾಯಕವಾಗಿದ್ದು,ಕಿವೀಸ್ ಕಟ್ಟಿಹಾಕಲು ಸೂಕ್ತ ರಣತಂತ್ರ ರೂಪಿಸಬೇಕಿದೆ.

ಸಂಭಾವ್ಯ ತಂಡಗಳು:

ಪಾಕಿಸ್ತಾನ:

ಸರ್ಫರಾಜ್ ಅಹ್ಮದ್(ನಾಯಕ), ಇಮಾಮ್​ ಉಲ್ ಹಕ್​, ಫಖರ್ ಜಮಾನ್, ಬಾಬರ್ ಅಜಮ್, ಮೊಹಮ್ಮದ್ ಹಫೀಜ್​, ಶೋಯೆಬ್ ಮಲಿಕ್, ಹ್ಯಾರಿಸ್ ಸೊಹೈಲ್, ಇಮಾದ್ ವಾಸಿಮ್, ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್, ಹಸನ್ ಅಲಿ

ನ್ಯೂಜಿಲ್ಯಾಂಡ್​:

ಕೇನ್​ ವಿಲಿಯಮ್ಸನ್​ (ನಾಯಕ), ಟಾಮ್​ ಬ್ಲಂಡೆಲ್​, ಟ್ರೆಂಟ್​ ಬೌಲ್ಟ್​, ಕಾಲಿನ್​ ಡಿ ಗ್ರ್ಯಾಂಡ್​ಹೋಮ್​, ಲೂಕಿ ಫರ್ಗ್ಯುಸನ್​, ಮಾರ್ಟಿನ್​ ಗಪ್ಟಿಲ್​, ಮ್ಯಾಟ್​ ಹೆನ್ರಿ, ಟಾಮ್​ ಲಥಮ್​​, ಕಾಲಿನ್​ ಮನ್ರೊ, ಜಿಮ್ಮಿ ನಿಶಾಮ್​, ಹೆನ್ರಿ ನಿಕೋಲ್ಸ್​, ಮಿಚೆಲ್​ ಸ್ಯಾಂಟ್ನರ್​, ಇಶ್​ ಸೋಧಿ, ಟಿಮ್​ ಸೌಥಿ, ರಾಸ್​ ಟೇಲರ್​

ABOUT THE AUTHOR

...view details