ಕರ್ನಾಟಕ

karnataka

ETV Bharat / sports

ಸೌತ್​ ಆಫ್ರಿಕಾ ವಿರುದ್ಧ ಕೀವಿಸ್​​ಗೆ ರೋಚಕ ಗೆಲುವು... ಬದಲಾಗದ ಹರಿಣಗಳ ಚೋಕರ್ಸ್‌ ಹಣೆಪಟ್ಟಿ

ಮಳೆಯಿಂದಾದ ತೇವಯುಕ್ತ ಪಿಚ್‌ನಿಂದಾಗಿ 49 ಓವರ್‌ಗಳಿಗೆ ಇಳಿಕೆಗೊಂಡ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ತಂಡ ನಾಲ್ಕು ವಿಕೆಟ್​ಗಳ  ರೋಚಕ ಗೆಲುವು ಸಾಧಿಸಿದೆ.

ಸೌತ್​ ಆಫ್ರಿಕಾ ವಿರುದ್ಧ ಕೀವಿಸ್​​ಗೆ ರೋಚಕ ಗೆಲವು

By

Published : Jun 20, 2019, 3:08 AM IST

Updated : Jun 20, 2019, 7:34 AM IST

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್​ ತಂಡ ನಾಲ್ಕು ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ.

ತೇವಯುಕ್ತ ಪಿಚ್‌ನಿಂದಾಗಿ 49 ಓವರ್‌ಗಳಿಗೆ ಇಳಿಕೆಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಯಲ್ಪಟ್ಟ ದಕ್ಷಿಣ ಆಫ್ರಿಕಾ ಆರಂಭಿಕ ಆಘಾತ ಎದುರಿಸಿತ್ತು. ಕ್ವಿಂಟನ್ ಡಿ ಕಾಕ್ 5 ರನ್​​ಗಳಿಸಿದಾಗ ಬೌಲ್ಟ್​ ಬೌಲಿಂಗ್​ಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ತಂಡಕ್ಕೆ ಆಘಾತ ನೀಡಿದರು.
ನಂತರ ಕ್ರಿಸ್​​ಗಿಳಿದ ನಾಯಕ ಪ್ಲೆಸಿಸ್​​ , ಹಾಶಿಮ್ ಆಮ್ಲ ಜತೆಗೂಡಿ ಅರ್ಧ ಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ತಂದು ಕೊಟ್ಟರು. ಆದರೆ ಉತ್ತಮವಾಗಿ ಆಡುತ್ತಿದ್ದ ಪ್ಲೆಸಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಲೂಕಿ ಫರ್ಗ್ಯೂಸನ್ ಜೊತೆಯಾಟವನ್ನು ಮುರಿದರು . ಪ್ಲೆಸಿಸ್​ ಬೆನ್ನಲ್ಲೇ ಅರ್ಧಶತಕಗಳಿಸಿದ್ದಆಮ್ಲಾ (55) ಕೂಡ ಸ್ಯಾಂಟ್ನರ್​ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.​
ಕೊನೆಯಲ್ಲಿ ಉತ್ತಮ ಆಟವಾಡಿದ ರಾಸಿ ವ್ಯಾನ್ ಡೆರ್ (67) ಮಿಲ್ಲರ್​(36) ಅವರ ಅರ್ಧ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ಆರು ವಿಕೆಟ್ ನಷ್ಟಕ್ಕೆ 241 ರನ್​ಗಳ ಸಾಧಾರಣ ಮೊತ್ತ ಪೇರಿಸಿತು. ಕಿವೀಸ್​ ಪರ ಉತ್ತಮ ಬೌಲಿಂಗ್​ ನಡೆಸಿದ ಲೂಕಿ ಫರ್ಗ್ಯೂಸನ್ 3, ಬೌಲ್ಟ್​, ಗ್ರ್ಯಾಂಡ್​ಹೋಮ್​, ಸ್ಯಾಂಟ್ನರ್​ ತಲಾ ಒಂದು ವಿಕೆಟ್​ ಪಡೆದರು.
242 ರನ್​ಗಳ ಗುರಿ ಬೆನ್ನಟ್ಟಿದ್ದ ಕಿವೀಸ್ ತಂಡ, ನಾಯಕ ಕೇನ್ ವಿಲಿಯಮ್ಸನ್(106) ಶತಕದ ನೆರವಿನಿಂದ 48.3 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ರೋಚಕ ಗೆಲುವು ದಾಖಲಿಸಿದೆ.
ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ನ್ಯೂಜಿಲೆಂಡ್​ ಆರಂಭವೂ ಉತ್ತಮವಾಗಿರಲಿಲ್ಲ. ಕಾಲಿನ್ ಮನ್ರೊ 9 ರನ್​​ಗಳಿಸಿದಾಗ ಕಗಿಸೋ ರಬಾಡಗೆ ವಿಕೆಟ್​​ ಒಪ್ಪಿಸಿದರು. ಈ ಹಂತದಲ್ಲಿ ಜತೆಗೂಡಿದ ಮಾರ್ಟಿನ್ ಗಪ್ಟಿಲ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಸಮಯೋಚಿತ ಆಟದಿಂದ ತಂಡವನ್ನು ಮುನ್ನಡೆಸಿದರು. 59 ಎಸೆತಗಳನ್ನು ಎದುರಿಸಿದ ಗಪ್ಟಿಲ್ ಐದು ಬೌಂಡರಿಗಳಿಂದ 35 ರನ್ ಗಳಿಸಿ ಹಿಟ್​ ವಿಕೆಟ್​​ ಆದರು. ಬಳಿಕ ಬಂದ ರಾಸ್ ಟೇಲರ್ ಕೇವಲ 1 ರನ್​​ಗಳಿಸಿ ಔಟಾದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಾಮ್ ಲಾಥಮ್‌ 1 ರನ್​​ಗಳಿಸಿ ವಿಕೆಟ್​​ ಒಪ್ಪಿಸಿದರು.
ಇದರಿಂದ ಕೀವಿಸ್​​ ಪಡೆ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೇಮ್ಸ್ ನೀಶಮ್(23) ಜತೆಗೂಡಿದ ನಾಯಕ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದರು. ಒಂದೆಡೆ ಕಠಿಣ ಪಿಚ್‌ನಲ್ಲಿ ವಿಕೆಟ್​​ಗಳು ಬಿಳುತ್ತಿದ್ದರೆ, ಇತ್ತ ಕ್ರಿಸ್​​ಗೆ ಅಂಟಿಕೊಂಡು ವಿಲಿಯಮ್ಸನ್ ನಾಯಕನ ಇನ್ನಿಂಗ್ಸ್ ಕಟ್ಟುವ ಮೂಲಕ ಗಮನ ಸೆಳೆದರು. ಕೊನೆಯ ಹಂತದಲ್ಲಿ ಪಂದ್ಯ ರೋಚಕತೆಯನ್ನು ಪಡೆದಿತ್ತು. ಅತೀವ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ವಿಲಿಯಮ್ಸನ್ ಸಿಕ್ಸರ್ ಮೂಲಕ ಶತಕ ಸಿಡಿಸಿ ಕಿವೀಸ್ ಗೆಲುವನ್ನು ಖಚಿತಗೊಳಿಸಿದರು.
ಅಂತಿಮವಾಗಿ ಇನ್ನು ಮೂರು ಎಸೆತಗಳು ಬಾಕಿ ಉಳಿದಿರುವಂತೆಯೇ 48.3 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಹರಿಣಗಳಿಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ದಕ್ಷಿಣ ಅಫ್ರಿಕಾ ತಂಡ ಈ ಸೋಲಿನೊಂದಿಗೆ ವಿಶ್ವಕಪ್​ನಿಂದ ಬಹುತೇಕ ಹೊರಬಿದ್ದಂತಾಯಿತು.
Last Updated : Jun 20, 2019, 7:34 AM IST

For All Latest Updates

TAGGED:

world cup

ABOUT THE AUTHOR

...view details