ಫೋರ್ಟ್ ಆಫ್ ಸ್ಪೇನ್: ವಿಂಡೀಸ್ ವಿರುದ್ಧ ಆರು ವಿಕೆಟ್ಗಳ ಭರ್ಜರಿ ಜಯ ಗಳಿಸಿರುವ ಭಾರತ ಏಕದಿನ ಸರಣಿ ತನ್ನದಾಗಿಸಿಕೊಂಡಿದೆ.
ಈಗಾಗಲೆ ಟಿ-20 ಸರಣಿಯನ್ನು 3-0ರಲ್ಲಿ ಗೆದ್ದು ಬೀಗಿರುವ ಭಾರತ ತಂಡ ಏಕದಿನ ಸರಣಿಯನ್ನು 2-0 ಮೂಲಕ ತನ್ನದಾಗಿಸಿಕೊಂಡಿದೆ. ಮೂರನೇ ಏಕದಿನ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಶತಕ ಬಾರಿಸಿ ತಂಡದ ಗೆಲುವಿಗೆ ಪ್ರಮುಖರಾದರು.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 7 ವಿಕೆಟ್ಗಳ ನಷ್ಟಕ್ಕೆ 35 ಓವರ್ಗೆ 240 ರನ್ಗಳನ್ನು ಕಲೆ ಹಾಕಿತ್ತು. ಡಿಎಲ್ಎಸ್ ನಿಯಮದ ಪ್ರಕಾರ ಭಾರತಕ್ಕೆ 35 ಓವರ್ಗೆ 250 ರನ್ಗಳ ಗುರಿಯಿತ್ತು.
ಕೆರಿಬಿಯನ್ನರ್ ನೀಡಿದ ಮೊತ್ತವನ್ನು ಬೆನ್ನತ್ತಿದ್ದ ಭಾರತ ಆರಂಭಿಕ ಆಘಾತ ಎದುರಿಸಿತು. ನಾಯಕನ ಜವಾಬ್ದಾರಿ ನಿಭಾಯಿಸಿದ ಕೊಹ್ಲಿ 99 ಎಸೆತಕ್ಕೆ 114 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಇನ್ನು ಅರ್ಧ ಶತಕ ಗಳಿಸಿದ ಶ್ರೇಯಸ್ ಅಯ್ಯರ್ ಕೊಹ್ಲಿಗೆ ಸಾಥ್ ನೀಡಿದರು. 65 ರನ್ಗಳನ್ನು ಗಳಿಸಿದ ಶ್ರೇಯಸ್ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ನಂತರ ಬಂದ ಕೇದಾರ್ ಜಾಧವ್ ಅಜೇಯ 19 ರನ್ಗಳಿಸಿದರು. ಭಾರತ ತಂಡ 32.3 ಓವರ್ಗೆ 4 ವಿಕೆಟ್ಗಳನ್ನು ಕಳೆದುಕೊಂಡು 256 ರನ್ಗಳನ್ನು ಕಲೆ ಹಾಕುವ ಮೂಲಕ ಗೆಲುವಿನ ದಡ ಸೇರಿದರು.
ಮೊದಲನೇ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 279 ರನ್ಗಳಿಸಿದರೆ, ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್ ತಂಡ 210 ರನ್ಗಳಿಗೆ ಆಲೌಟ್ ಆಗುವ ಮೂಲಕ 59 ರನ್ಗಳಿಂದ ಸೋಲೊಪ್ಪಿಕೊಂಡಿತು. ಸರಣಿಯುದ್ದಕ್ಕೂ ಉತ್ತಮವಾಗಿ ಆಡಿರುವ ವಿರಾಟ್ ಕೊಹ್ಲಿ ಸರಣಿ ಮತ್ತು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.