ಕರ್ನಾಟಕ

karnataka

ETV Bharat / sports

ತವರಲ್ಲಿ ಬಾಂಗ್ಲಾ ಮಣಿಸಿದ ಇಂಗ್ಲೆಂಡ್​: 106 ರನ್​ಗಳ ಭರ್ಜರಿ ಗೆಲುವು - kannada news,etv bharat, England, Bangla,run,

ಕಾರ್ಡಿಫ್​ನ ಶೋಫಿಯಾ ಗಾರ್ಡನ್ಸ್​ನಲ್ಲಿ ನಡೆದ ಐಸಿಸಿ ವಿಶ್ವಕಪ್ 2019 ರ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾ ತಂಡದ ವಿರುದ್ಧ ಇಂಗ್ಲೆಂಡ್ 106 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಬಾಂಗ್ಲಾ ಮಣಿಸಿದ ಇಂಗ್ಲೆಂಡ್​

By

Published : Jun 9, 2019, 4:11 AM IST

ಕಾರ್ಡಿಫ್:ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಬಾಂಗ್ಲಾ ತಂಡದ ವಿರುದ್ಧ ಇಂಗ್ಲೆಂಡ್ 106 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಕಾರ್ಡಿಫ್​ನ ಶೋಫಿಯಾ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆರಂಭಿಕ ಬ್ಯಾಟ್ಸ್ ಮನ್ ಜಾಸನ್ ರಾಯ್ ದಾಖಲಿಸಿದ 153 ರನ್ ನೆರವಿನಿಂದ ನಿಗದಿತ 50 ಓವರ್​​ಗಳಲ್ಲಿ 386 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 48.05 ಓವರ್​ಗಳಿಗೇ ತನ್ನೆಲ್ಲಾ ವಿಕೆಟ್​​ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಳ್ಳುವ ಮೂಲಕ ಇಂಗ್ಲೆಂಡ್​ಗೆ ಬರೊಬ್ಬರಿ 106 ರನ್​ಗಳ ಜಯ ದೊರೆತಿದೆ.

ಈಗಾಗಲೇ ಆಡಿರುವ ಮೂರು ಪಂದ್ಯಗಳ ಪೈಕಿ ಇಂಗ್ಲೆಂಡ್ ತಂಡ, ಬಾಂಗ್ಲಾವನ್ನು ಮಣಿಸುವ ಮೂಲಕ 2ನೇ ಗೆಲುವನ್ನು ದಾಖಲಿಸಿದೆ.

ABOUT THE AUTHOR

...view details