ಕರ್ನಾಟಕ

karnataka

By

Published : Oct 24, 2019, 6:11 PM IST

ETV Bharat / sports

ತಂದೆಯಂತೆ ಮಗಳು: ಅಪ್ಪನೊಂದಿಗೆ ಹೊಸ ಜೀಪು ತೊಳೆದ ಧೋನಿ ಪುತ್ರಿ!

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಪುತ್ರಿಯೊಂದಿಗೆ ಜೀಪು ತೊಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಧೋನಿ ಪುತ್ರಿ

ರಾಂಚಿ: ಏಕದಿನ ವಿಶ್ವಕಪ್ ಟೂರ್ನಿ ನಂತರ ಕ್ರಿಕೆಟ್​ನಿಂದ ಕೊಂಚ ಬಿಡುವು ಮಾಡಿಕೊಂಡು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಕುಟುಂಬದೊಂದಿಗೆ ಕಾಲ ಕಾಳೆಯುತ್ತಿರುವ ಮಹೇಂದ್ರ ಸಿಂಗ್ ಧೋನಿ. ತಮ್ಮ ಪುತ್ರಿಯೊಂದಿಗೆ ಜೀಪು ತೊಳೆಯುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಧೋನಿ ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಭಾರತೀಯ ಸೇನೆ ಬಳಸುವ ನಿಸ್ಸಾನ್ ಜೊಂಗಾ ಜೀಪು ಖರೀದಿಸಿದ್ದರು. ಇದೀಗ ಧೋನಿ ಮತ್ತು ಅವರ ಪುತ್ರಿ ಝೀವಾ ಹೊಸ ನಿಸ್ಸಾನ್ ಜೊಂಗಾ ಜೀಪು ತೊಳೆಯುತ್ತಿರುವ ವಿಡಿಯೋವನ್ನ ಧೋನಿ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ದೊಡ್ಡ ವಾಹನವೊಂದನ್ನ ತೊಳೆಯುವಾಗ ಮಾಡುವ ಸಣ್ಣ ಸಹಾಯ ತುಂಬಾ ವಿಶೇಷವಾಗಿರುತ್ತದೆ ಎಂದು ಬರೆದುಕೊಂಡಿರುವ ಧೋನಿ ತಮ್ಮ ಪುತ್ರಿ ಜೀಪು ತೊಳೆಯಲು ಸಹಾಯ ಮಾಡುತ್ತಿರುವ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

ನಿಸ್ಸಾನ್​ ಜೊಂಗಾ ಜೀಪ್​​ನಲ್ಲಿ ರಾಂಚಿ ಮೈದಾನಕ್ಕೆ ಬಂದ ಮಾಹಿ... VIDEO ವೈರಲ್​!

ಧೋನಿ ಇದೇ ಜೀಪಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದ ಅಂತಿಮ ದಿನ ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ABOUT THE AUTHOR

...view details