ಕರ್ನಾಟಕ

karnataka

ETV Bharat / sports

ಯಾವುದಾದ್ರೂ ಒಂದು ಹುದ್ದೆಯನ್ನು ಮಿಸ್ಬಾ ಉಲ್​ ಹಕ್ ತ್ಯಜಿಸಲೇಬೇಕು- ಜಹೀರ್​ ಅಬ್ಬಾಸ್

ಇತ್ತೀಚಿನ ಇಂಗ್ಲೆಂಡ್​ ಪ್ರವಾಸದಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಅಭಿಪ್ರಾಯ ವ್ಯಕ್ತಪಿಡಿಸಿರುವ ಲೆಜೆಂಡರಿ ಬ್ಯಾಟ್ಸ್​ಮನ್​ ದೊಡ್ಡ ಮೊತ್ತದ ಇನ್ನಿಂಗ್ಸ್​ ಮುನ್ನಡೆ ಪಡೆದ್ರೂ ಸೋಲುವುದು ಕೆಟ್ಟ ತಂಡಗಳು ಮಾತ್ರ ಎಂದು ಛೇಡಿಸಿದ್ದಾರೆ..

ಮಿಸ್ಬಾ ಉಲ್​ ಹಕ್
ಮಿಸ್ಬಾ ಉಲ್​ ಹಕ್

By

Published : Sep 8, 2020, 8:00 PM IST

ಲಾಹೋರ್ :ಪಾಕಿಸ್ತಾನ ದಿಗ್ಗಜ ಜಹೀರ್ ಅಬ್ಬಾಸ್ ಅವರು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಮತ್ತು ಮುಖ್ಯ ಸೆಲೆಕ್ಟರ್ ಆಗಿರುವ ಮಿಸ್ಬಾ ಉಲ್ ಹಕ್​ ತಮ್ಮ ಹುದ್ದೆಯಲ್ಲಿ ಯಶಸ್ವಿಯಾಗಬೇಕಾದ್ರೆ ಯಾವುದಾದರೊಂದು ಜವಾಬ್ದಾರಿ ತ್ಯಜಿಸುವಂತೆ ಸಲಹೆ ನೀಡಿದ್ದಾರೆ.

ನಾನು ಯಾವಾಗಲೂ ಒಬ್ಬ ವ್ಯಕ್ತಿ ಎರಡು ಉನ್ನತ ಸ್ಥಾನ ಅಲಂಕರಿಸುವುದನ್ನು ಸ್ವೀಕರಿಸುವುದಿಲ್ಲ. ಯಾಕೆಂದರೆ, ಅದು ಅವರಿಗೆ ತೊಂದರೆಯಾಗುತ್ತದೆ. ವೃತ್ತಿಪರ ಕ್ರಿಕೆಟ್​ ಸುಲಭವಲ್ಲ. ಈ ಬಗ್ಗೆ ಸ್ವತಃ ಮಿಸ್ಬಾ ಅವರೇ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ, ಕೊನೆಯ ದಿನಗಳಲ್ಲಿ ಯಾರು ಮನ್ನಿಸುವಿಕೆಯನ್ನು ಕೇಳಲು ಬಯಸುವುದಿಲ್ಲ ಎಂದು ಜಹೀರ್​ ಅಬ್ಬಾಸ್​ ಹೇಳಿದ್ದಾರೆ.

ಇತ್ತೀಚಿನ ಇಂಗ್ಲೆಂಡ್​ ಪ್ರವಾಸದಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಅಭಿಪ್ರಾಯ ವ್ಯಕ್ತಪಿಡಿಸಿರುವ ಲೆಜೆಂಡರಿ ಬ್ಯಾಟ್ಸ್​ಮನ್​ ದೊಡ್ಡ ಮೊತ್ತದ ಇನ್ನಿಂಗ್ಸ್​ ಮುನ್ನಡೆ ಪಡೆದ್ರೂ ಸೋಲುವುದು ಕೆಟ್ಟ ತಂಡಗಳು ಮಾತ್ರ ಎಂದು ಛೇಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಯುವ ಬ್ಯಾಟ್ಸ್​ಮನ್​ ಹೈದರ್​ ಅಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆತನೊಬ್ಬ ಧೈರ್ಯಶಾಲಿ ಉತ್ತಮ ಬ್ಯಾಟ್ಸ್​ಮನ್​. ಆದರೆ, ಅವನನ್ನು ಬೇರೆ ಯಾವುದೇ ದೊಡ್ಡ ಆಟಗಾರನೊಂದಿಗೆ ಹೋಲಿಸುವುದು ಅಂದ್ರೆ ಅವನನ್ನು ಹಾಳು ಮಾಡುವುದಕ್ಕೆ ಸಮನಾಗಿರುತ್ತದೆ ಎಂದು ಜಹೀರ್ ಹೇಳಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 100 ಶತಕ ದಾಖಲಿಸಿರುವ ಏಕೈಕ ಕ್ರಿಕೆಟಿಗನಾಗಿರುವ ಜಹೀರ್​ ಅಬ್ಬಾಸ್​ 2020ರ ಹಾಲ್ ಆಫ್​ ಫೇಮ್​ ಗೌರವಕ್ಕೆ ಪಾತ್ರರಾಗಿದ್ದರು.

ABOUT THE AUTHOR

...view details