ಕರ್ನಾಟಕ

karnataka

ETV Bharat / sports

ಬುಮ್ರಾ ದಾಖಲೆ ಮುರಿದ ಚಹಾಲ್: ಟಿ-20ಯಲ್ಲಿ ಈ ರೆಕಾರ್ಡ್ ಸಾಧನೆ - ಟಿ-20ಯಲ್ಲಿ ಚಹಾಲ್​ ದಾಖಲೆ

ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾಗಿಯಾಗುವ ಮೂಲಕ ಯಜುವೇಂದ್ರ ಚಹಾಲ್​ 100ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು, ಜತೆಗೆ ಟಿ-20ಯಲ್ಲಿ ಭಾರತದ ಪರ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.

Yuzvendra chahal
Yuzvendra chahal

By

Published : Mar 12, 2021, 10:54 PM IST

ಅಹಮದಾಬಾದ್​:ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಸೋಲು ಕಂಡಿದೆ. ಈ ಮೂಲಕ ಸರಣಿಯಲ್ಲಿ 0-1 ಅಂತರದ ಹಿನ್ನಡೆ ಅನುಭವಿಸಿದೆ. ಈ ನಡುವೆ ಭಾರತದ ಲೆಗ್​​​ ಸ್ಪಿನ್ನರ್​ ಚಹಾಲ್ ಇಂದಿನ ಪಂದ್ಯದಲ್ಲಿ​ ಹೊಸ ದಾಖಲೆ ಬರೆದರು.

ಇದನ್ನೂ ಓದಿ:ಕೊಹ್ಲಿ ಪಡೆ ಮೇಲೆ ಆಂಗ್ಲರ ಸವಾರಿ... ಮೊದಲ ಟಿ-20 ಗೆದ್ದು ಬೀಗಿದ ಇಂಗ್ಲೆಂಡ್​!

ಇಂಗ್ಲೆಂಡ್​ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಚಹಾಲ್​, ಜೋಸ್​ ಬಟ್ಲರ್​ ವಿಕೆಟ್ ಪಡೆದುಕೊಳ್ಳುವ ಮೂಲಕ ಟಿ-20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್​ ಪಡೆದ ಪ್ಲೇಯರ್​ ಆಗಿ ಹೊರಹೊಮ್ಮಿದ್ದಾರೆ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್​ ಬುಮ್ರಾ 50 ಟಿ-20 ಪಂದ್ಯಗಳಿಂದ 59 ವಿಕೆಟ್​​ ಪಡೆದುಕೊಂಡಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಚಹಾಲ್​ ಮತ್ತೊಂದು ವಿಕೆಟ್​ ಪಡೆದುಕೊಳ್ಳುವ ಮೂಲಕ ಭಾರತದ ಪರ ಟಿ-20ಯಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​​ ಆಗಿದ್ದಾರೆ. ಜತೆಗೆ ಬುಮ್ರಾ ದಾಖಲೆಯನ್ನೂ ಬ್ರೇಕ್​ ಮಾಡಿದ್ದಾರೆ.

ವೇಗಿ ಜಸ್​​ಪ್ರೀತ್​ ಬುಮ್ರಾ

ಚಹಾಲ್ ಇಲ್ಲಿಯವರೆಗೆ ಆಡಿರುವ​​ 46 ಟಿ-20 ಪಂದ್ಯಗಳಿಂದ 60 ವಿಕೆಟ್​ ಪಡೆದುಕೊಂಡಿದ್ದು, ಜತೆಗೆ ಇಂದಿನ ಪಂದ್ಯ ಚಹಾಲ್​ಗೆ 100ನೇ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ಕೂಡ ಆಗಿದೆ. 2016ರಲ್ಲಿ ಜಿಂಬಾಬ್ವೆ ವಿರುದ್ಧ ಪದಾರ್ಪಣೆ ಮಾಡಿರುವ ಲೆಗ್​​ ಸ್ಪಿನ್ನರ್​​ ಇಲ್ಲಿಯವರೆಗೆ 54 ಪಂದ್ಯಗಳಿಂದ 92 ವಿಕೆಟ್​​ ಪಡೆದುಕೊಂಡಿದ್ದಾರೆ.

ABOUT THE AUTHOR

...view details