ಕರ್ನಾಟಕ

karnataka

ETV Bharat / sports

ಪಂದ್ಯ ಸೋತಿರಬಹುದು, ಲಕ್ಷಾಂತರ ಮಂದಿಯ ಹೃದಯ ಗೆದ್ದಿದ್ದೀರಾ: ಸಾಮ್ಸನ್​ ಆಟಕ್ಕೆ ರೈನಾ ಫಿದಾ

ನಾಯಕನಾದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಐಪಿಎಲ್​ನ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾದ ಸಂಜು ಆಟವನ್ನು ಕ್ರಿಕೆಟ್​ ಪಂಡಿತರು ಹಾಗೂ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಎಸ್​ಕೆ ಉಪನಾಯಕ ರೈನಾ ಕೂಡ ಟ್ವಿಟರ್​ ಮೂಲಕ ಸಂಜು ಆಟವನ್ನು ಗುಣಗಾನ ಮಾಡಿದ್ದಾರೆ.

ಸುರೇಶ್ ರೈನಾ - ಸಂಜು ಸಾಮ್ಸನ್​
ಸುರೇಶ್ ರೈನಾ - ಸಂಜು ಸಾಮ್ಸನ್​

By

Published : Apr 13, 2021, 4:32 PM IST

ಮುಂಬೈ: ಸೋಮವಾರ ಪಂಜಾಬ್ ಕಿಂಗ್ಸ್​ ವಿರುದ್ಧ 63 ಎಸೆತಗಳಲ್ಲಿ 119 ರನ್​ ಗಳಿಸಿದ ಸಾಮ್ಸನ್​ ಆಟವನ್ನು ಮೆಚ್ಚಿಕೊಂಡಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಟ್ವಿಟರ್​ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ 221ರನ್ ​ಗಳಿಸಿತ್ತು. 222 ರನ್​ಗಳ ಗುರಿ ಬೆನ್ನತ್ತಿದ ರಾಯಲ್ಸ್​​ ತಂಡದ ಸಾಮ್ಸನ್ ಹೊರತುಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸಿದರು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಸಂಜು 63 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್​ಗಳ ನೆರವಿನಿಂದ 119 ರನ್​ ಗಳಿಸಿ ಕೊನೆಯ ಎಸೆತದಲ್ಲಿ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಕ್ಯಾಚ್ ನೀಡಿ ನಿರಾಶೆಯನುಭವಿಸಿದರು. ಕೊನೆಗೆ ರಾಜಸ್ಥಾನ ತಂಡ 217 ರನ್​ ಗಳಿಸಿ 4 ರನ್​ಗಳ ವಿರೋಚಿತ ಸೋಲು ಕಂಡಿತು.

ಇದನ್ನು ಓದಿ: 2 ವರ್ಷದ ನಂತರ ಕಮ್​ಬ್ಯಾಕ್ ಮಾಡಿದ ಪಂದ್ಯದಲ್ಲೇ ಕೊಹ್ಲಿ-ರೋಹಿತ್ ದಾಖಲೆ ಸರಿಗಟ್ಟಿದ ರೈನಾ

ಆದರೆ ನಾಯಕನಾದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಐಪಿಎಲ್​ನ ಮೊದಲ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾದ ಸಂಜು ಆಟವನ್ನು ಕ್ರಿಕೆಟ್​ ಪಂಡಿತರು ಹಾಗೂ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಎಸ್​ಕೆ ಉಪನಾಯಕ ರೈನಾ ಕೂಡ ಟ್ವಿಟರ್​ ಮೂಲಕ ಸಂಜು ಆಟವನ್ನು ಗುಣಗಾನ ಮಾಡಿದ್ದಾರೆ.

"ಎಂತಹ ಅದ್ಭುತ ಇನ್ನಿಂಗ್ಸ್​ ಸಂಜು ಸಾಮ್ಸನ್​!, ತುಂಬಾ ಚೆನ್ನಾಗಿ ಆಡಿದ್ದೀರಾ, ನೀವು ಖಂಡಿತಾ ಈ ದಿನ ಸಾಕಷ್ಟು ಹೃದಯಗಳನ್ನು ಗೆದ್ದಿದ್ದೀರಾ, ಹೀಗೆ ಮುಂದುವರೆಯಿರಿ, ನಿಮ್ಮ ಮೇಲೆ ತುಂಬಾ ಗೌರವವಿದೆ" ಎಂದು ಟ್ವೀಟ್​ ಮಾಡಿದ್ದಾರೆ.

ಭಾರತ ತಂಡದ ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್, ವೇಗಿ ಜಸ್ಪ್ರೀತ್ ಬುಮ್ರಾ, ವಿರೇಂದ್ರ ಸೆಹ್ವಾಗ್, ಹರ್ಬಜನ್​ ಸಿಂಗ್, ಸಂಜಯ್ ಮಂಜ್ರೇಜರ್, ಶಾಯ್ ಹೋಪ್ ಕೂಡ ಟ್ವೀಟ್ ಮೂಲಕ ಸಂಜು ಆಟವನ್ನು ಪ್ರಸಂಶಿಸಿದ್ದಾರೆ.

ABOUT THE AUTHOR

...view details