ಹೈದರಾಬಾದ್:ವಿಶ್ವಕಪ್ ಟೂರ್ನಿ ಆರಂಭಕ್ಕೆ ಸುಮಾರು ಎರಡು ತಿಂಗಳಷ್ಟೇ ಬಾಕಿ ಇದ್ದು ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್ ಮಹತ್ವದ ಟೂರ್ನಿಗೆ ತಂಡ ಪ್ರಕಟಿಸಿದೆ.
ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದು ಮಾರ್ಟಿನ್ ಗಪ್ಟಿಲ್, ಟಾಮ್ ಲಥಮ್, ಕಾಲಿನ್ ಮುನ್ರೋ, ರಾಸ್ ಟೇಲರ್, ಹೆನ್ರಿ ನಿಕೋಲ್ಸ್ ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.
ಕಾಲಿನ್ ಡಿ ಗ್ರಾಂಡ್ಹೋಮ್ ಹಾಗೂ ಜಿಮ್ಮಿ ನೀಶಾಮ್ ಆಲ್ರೌಂಡರ್ ಆಗಿ ಕಾಣಿಸಿಕೊಂಡರೆ ಮಿಚೆಲ್ ಸ್ಯಾಂಟ್ನರ್ ಹಾಗೂ ಇಶ್ ಸೋಧಿ ಸ್ಪಿನ್ನರ್ ವಿಭಾಗದ ಹೊಣೆ ಹೊತ್ತಿದ್ದಾರೆ. ಟಾಮ್ ಲಥಮ್ ಕೀಪರ್ ಆಗಿದ್ದು ಟಾಮ್ ಬ್ಲಂಡೆಲ್ ಬ್ಯಾಕಪ್ ಕೀಪರ್ ಆಗಿರಲಿದ್ದಾರೆ. ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ.
ಮಹತ್ವದ ಟೂರ್ನಮೆಂಟ್ಗೆ ಅತ್ಯಂತ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದೇವೆ. ಇದರಿಂದ ಕೆಲ ಆಟಗಾರರಿಗೆ ನೋವಾಗಿರಬಹುದು. ತಂಡದ ಸಮತೋಲನ ಕಾಪಾಡಲು ಒಂದೊಳ್ಳೆ ತಂಡವನ್ನು ಆರಿಸಿದ್ದೇವೆ ಎಂದು ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
ವಿಶ್ವಕಪ್ಗಾಗಿ ಸದ್ಯ ಆಯ್ಕೆಯಾದ ಆಟಗಾರರು ಲಿಂಕನ್ನಲ್ಲಿ ಎಪ್ರಿಲ್ 15,16,23,24,30 ಹಾಗೂ ಮೇ 1ರಂದು ಕಠಿಣ ತರಬೇತಿ ನಡೆಸಲಿದೆ. ತರಬೇತಿ ಬಳಿಕ ಆಸ್ಟ್ರೇಲಿಯಾದಲ್ಲಿ ಮೂರು ಅನಧಿಕೃತ ಏಕದಿನ ಪಂದ್ಯವನ್ನಾಡಲಿದೆ. ಜೂನ್ 1ರಂದು ಕಿವೀಸ್ ವಿಶ್ವಕಪ್ ಮೊದಲ ಪಂದ್ಯವನ್ನು ಶ್ರೀಲಂಕಾ ಜೊತೆ ಆಡಲಿದೆ.
ವಿಶ್ವಕಪ್ ತಂಡ ಇಂತಿದೆ:
ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಟಾಮ್ ಲಥಮ್(ವಿ.ಕೀ), ಟಾಮ್ ಬ್ಲಂಡೆಲ್(ವಿ.ಕೀ),ಮಿಚೆಲ್ ಸ್ಯಾಂಟ್ನರ್,ಕಾಲಿನ್ ಡಿ ಗ್ರಾಂಡ್ಹೋಮ್, ಲಾಕಿ ಫರ್ಗ್ಯೂಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಕಾಲಿನ್ ಮುನ್ರೋ, ಹೆನ್ರಿ ನಿಕೋಲ್ಸ್, ಮಾರ್ಟಿನ್ ಗಪ್ಟಿಲ್, ಜಿಮ್ಮಿ ನೀಶಾಮ್, ಮ್ಯಾಟ್ ಹೆನ್ರಿ