ಲಾರ್ಡ್ಸ್: 2019ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡವನ್ನು ಬೌಂಡರಿ ಲೆಕ್ಕಾಚಾರದ ಮೇಲೆ ವಿನ್ನರ್ ಎಂದು ಘೋಷಿಸಿರುವುದು ವಿವಾದಕ್ಕೀಡಾದರೆ, ಇದೀಗ ಒಂದು ಕಾಲದ ಅತ್ಯುತ್ತಮ ಅಂಪೈರ್ ಎಂಬ ಖ್ಯಾತಿ ಪಡೆದಿದ್ದ ಸೈಮನ್ ಟಫೆಲ್ ಫೈನಲ್ ಪಂದ್ಯದ ಅಂಪೈರಿಂಗ್ ಪ್ರಮಾದದ ಬಗ್ಗೆ ಕಿಡಿಕಾರಿದ್ದಾರೆ.
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 15 ರನ್ಗಳ ಅವಶ್ಯಕತೆಯಿತ್ತು. ಮೂರನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಸಿಕ್ಸರ್ ಬಾರಿಸಿದ್ದರು. ಇದರಿಂದ ಇನ್ನು 3 ಎಸೆತದಲ್ಲಿ ಆಂಗ್ಲರಿಗೆ 9 ರನ್ ಅಗತ್ಯವಿತ್ತು. ಈ ವೇಳೆ ಬೆನ್ಸ್ಟೋಕ್ಸ್ ಡೀಪ್ ಕವರ್ನಲ್ಲಿ ಚೆಂಡನ್ನು ಬಾರಿಸಿದರು ಎರಡನೇ ರನ್ ತೆಗೆಯುವ ಪ್ರಯತ್ನದಲ್ಲಿದ್ದರು. ಈ ವೇಳೆ ಗಪ್ಟಿಲ್ ಎಸೆದ ಚೆಂಡನ್ನು ಸ್ಟೋಕ್ಸ್ ಬ್ಯಾಟ್ಗೆ ತಗುಲಿ ಬೌಂಡರಿ ಸೇರಿತ್ತು. ಇದಕ್ಕೆ ಅಂಪೈರ್ ಧರ್ಮಸೇನಾ ಇಂಗ್ಲೆಂಡ್ಗೆ ಆರು ರನ್ ನೀಡಿದ್ದರು.