ಹೈದರಾಬಾದ್: ಭಾರತದ ಲೆಜೆಂಡರಿ ಆರಂಭಿಕ ಜೋಡಿಯಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ 179 ಏಕದಿನ ಪಂದ್ಯಗಳ ಜೊತೆಯಾಟದಲ್ಲಿ 47.55 ಸರಾಸರಿಯಲ್ಲಿ 8,227 ರನ್ಗಳ ಜೊತೆಯಾಟ ನಡೆಸಿದ್ದರು.
ಐಸಿಸಿ ಮಂಗಳವಾರ ತನ್ನ ಅಧಿಕೃತ್ ಟ್ವಿಟರ್ನಲ್ಲಿ ಸಚಿನ್ ಹಾಗೂ ಗಂಗೂಲಿಯವರ ಫೋಟೋ ಶೇರ್ ಮಾಡಿದ್ದು, ಅವರ ಜೊತೆಯಾಟದ ಅಂಕಿ- ಅಂಶಗಳೊಂದಿಗೆ ಭಾರತದ ಶ್ರೇಷ್ಠ ಜೋಡಿಯ ದಾಖಲೆಯನ್ನು ವಿವರಗಳನ್ನು ಶೇರ್ ಮಾಡಿಕೊಂಡಿದೆ.
ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಏಕದಿನ ಕ್ರಿಕೆಟ್ನಲ್ಲಿ 176 ಜೊತೆಯಾಟ ನಡೆಸಿದ್ದು 47.55 ಸರಾಸರಿಯಲ್ಲಿ 8,227 ರನ್ಗಳ ಜೊತೆಯಾಟ ನಡೆಸಿದೆ. ಏಕದಿನ ಪಂದ್ಯಗಳಲ್ಲಿ ಬೇರೆ ಯಾವುದೇ ಜೋಡಿ ಒಟ್ಟಿಗೆ 6,000 ರನ್ ಕೂಡ ದಾಟಿಲ್ಲ ಎಂದು ಟ್ವೀಟ್ ಮಾಡಿದೆ.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಇದು ನಮ್ಮ ಅದ್ಭುತ ನೆನೆಪು ಮರುಕಳಿಸಿದೆ ದಾದಿ, ಅಂದ ಹಾಗೆ ಇನ್ನಿಂಗ್ಸ್ ಒಂದರಲ್ಲಿ 2 ಹೊಸ ಚೆಂಡು, ನಾಲ್ಕು ಫೀಲ್ಡರ್ಗಳು ಮಾತ್ರವೇ ಹೊರಗಿರುವ ಹೊಸ ನಿಯಮ ಇದ್ದಿದ್ದರೆ ನಾವು ಇನ್ನೆಷ್ಟು ರನ್ಗಳನ್ನು ಹೆಚ್ಚವರಿಯಾಗಿ ಗಳಿಸುತ್ತಿದ್ದೆವು ? ಎಂದು ಗಂಗೂಲಿ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಕೂಡಲೆ ಪ್ರತಿಕ್ರಿಯೇ ನೀಡಿರುವ ಗಂಗೂಲಿ, ಇನ್ನು 4000 ರನ್ಗಳನ್ನು ಗಳಿಸಬಹುದಿತ್ತು. 2 ಹೊಸ ಚೆಂಡುಗಳು, ವಾವ್, ಮೊದಲ ಓವರ್ನಲ್ಲಿ ಕವರ್ ಡ್ರೈವ್ ಮೂಲಕ ಬೌಂಡರಿ ಬಾರಿಸಿದಂತೆಯೇ 50 ಓವರ್ಗಳಲ್ಲೂ ಸುಲಭವಾಗಿ ಬ್ಯಾಟ್ ಮಾಡಬಹುದಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಏಕದಿನ ಕ್ರಿಕೆಟ್ನಲ್ಲಿ ಮೂರು ಪವರ್ ಪ್ಲೇಗಳು ಚಾಲ್ತಿಯಲ್ಲಿವೆ. ಮೊದಲ 10 ಓವರ್ಗಳಲ್ಲಿ ಇಬ್ಬರು ಫೀಲ್ಡರ್ಗಳು 30 ಅಡಿ ಹೊರಗೆ ಇರುತ್ತಿದ್ದರು. ಅಲ್ಲದೆ 25 ಓವರ್ಗಳಿಗೆ ಒಂದು ಚೆಂಡನ್ನು ಬದಲಾಯಿಸಲಾಗುತ್ತದೆ. ಇದರಿಂದ ರನ್ಗಳಿಸಲು ಸುಲಭವಾಗಿದೆ. ಆದರೆ, ಹಿಂದೆ 50 ಓವರ್ಗಳಲ್ಲಿ ಒಂದೇ ಚೆಂಡನ್ನು ಬಳಕೆ ಮಾಡಲಾಗುತ್ತಿತ್ತು. ಮೊದಲ 10 ಓವರ್ಗಳ ನಂತರ 5 ಫೀಲ್ಡರ್ಗಳು 30 ಅಡಿ ವೃತ್ತದಿಂದ ಹೊರ ಹೋಗುತ್ತಿದ್ದರಿಂದ ರನ್ಗಳಿಸಲು ಕಷ್ಟವಾಗುತ್ತಿತ್ತು. ಆದ್ದರಿಂದ ಈಗಿನ ನಿಯಮಗಳು ಅಂದು ಇದ್ದಿದ್ದರೆ ಸಚಿನ್ ಮತ್ತಷ್ಟು ರನ್ಗಳಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.