ಸಿಡ್ನಿ: ಆಡಳಿತಾತ್ಮಕ ಧೋಷದಿಂದ ವುಮೆನ್ಸ್ ಬಿಬಿಎಲ್ ಫ್ರಾಂಚೈಸಿ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ 25000(13. ಡಾಲರ್ ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ.
ಪ್ರಸ್ತುತ ನಡೆಯುವತ್ತಿರುವ 7ನೇ ಬಿಗ್ಬ್ಯಾಶ್ ಲೀಗ್ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದ ವೇಳೆ ಪ್ರಾಥಮಿಕ ತಂಡದಲ್ಲಿರದ ಹೇಲೀ ಸಿಲ್ವರ್ ಹೋಮ್ಸ್ ಅವರನ್ನು ತಂಡದಲ್ಲಿ ಹೆಸರಿಸಿದ್ದಕ್ಕೆ ಈ ದಂಡವನ್ನು ವಿಧಿಸಲಾಗಿದೆ.
ಗಾಯದ ಕಾರಣ ರೆನೆಗೇಡ್ಸ್ ವಿರುದ್ಧದ ಪಂದ್ಯದಲ್ಲಿ ಸಿಲ್ವರ್ ಹೋಮ್ಸ್ ತಂಡಕ್ಕೆ ಸೇರ್ಪಡೆಗೊಳಿಸಲು ಸಿಕ್ಸರ್ ನಿರ್ಧರಿಸಿದೆ. ಆದರೆ ಪಂದ್ಯ ಪ್ರಾರಂಭವಾಗುವ ಮೊದಲು ಹೋಮ್ಸ್ ದಾಖಲೆಗಳನ್ನು ಪಂದ್ಯದ ಅಧಿಕಾರಿಗಳಿಗೆ ಒದಗಿಸಿರಲಿಲ್ಲ. ಆದ್ದರಿಂದ ಅವರು ಆಯ್ಕೆ ಅನರ್ಹರಾಗಿದ್ದರು. ಸಿಕ್ಸರ್ಗೆ ನಂತರ ತಮ್ಮ ತಪ್ಪಿನ ಅರಿವಾಗಿ ಹೋಮ್ಸ್ರನ್ನು ತಂಡದಿಂದ ಕೈಬಿಟ್ಟಿದೆ.
ಕ್ರಿಕೆಟ್ ಆಸ್ಟ್ರೇಲಿಯಾದ ಹಿರಿಯ ಕಂಡಕ್ಟ್ ಕಮಿಷನರ್ ಸುಲ್ಲಿವಾನ್ ಕ್ಯೂಸಿ ಈ ನಿಯಮ ಉಲ್ಲಂಘನೆಯನ್ನು ಗಂಭೀರವಾದದ್ದು ಎಂದು ಕರೆದಿದ್ದಾರೆ. ಆದರೂ ತಮ್ಮ ತಪ್ಪನ್ನು ಸ್ವಯಂ ವರದಿ ಮಾಡಿಕೊಂಡು , ವೇಗದ ಬೌಲರ್ಅನ್ನು ಬೇಗ ತಂಡದಿಂದ ತೆಗೆದುಕು ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ತಪ್ಪನ್ನು ತಿಳಿದು ಸ್ವಯಂ ವರದಿ ಮಾಡಿಕೊಂಡಿದ್ದರಿಂದ 25000 ಡಾಲರ್ ದಂಡದ ಮೊತ್ತವನ್ನು 15,000 ಡಾಲರ್ ಮೊತ್ತವನ್ನು ಕಡಿತಗೊಳಿಸಲಾಗಿದೆ.