ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ತೆರಳಿದ ಮೇಲೆ ಐಪಿಎಲ್​ಗೆ ವ್ಯಾಟ್ಸನ್​ ನಿವೃತ್ತಿ: ಖಚಿತಪಡಿಸಿದ ಸಿಎಸ್​ಕೆ - Chennai Super Kings

ಹಿಂದಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶೇನ್​ ವ್ಯಾಟ್ಸನ್​ ಈ ಸಲದ ಟೂರ್ನಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಹೀಗಾಗಿ ಇದೀಗ ಎಲ್ಲಾ ರೀತಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡುವ ನಿರ್ಧಾರ ಮಾಡಿದ್ದಾರೆ.

Watson
Watson

By

Published : Nov 2, 2020, 8:46 PM IST

ದುಬೈ:ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ ಶೇನ್​ ವ್ಯಾಟ್ಸನ್​​ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಣೆ ಮಾಡುವುದು ಬಹುತೇಕ ಖಚಿತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್​ ಕಿಂಗ್ಸ್​​​ ಅಧಿಕೃತ ಮಾಹಿತಿ ಹೊರಹಾಕಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ 10 ವರ್ಷಗಳ ಕಾಲ ಮೂರು ಫ್ರಾಂಚೈಸಿಗಳಲ್ಲಿ ವ್ಯಾಟ್ಸನ್​ ಆಡಿದ್ದು, 2008ರಲ್ಲಿ ಆರ್​ಆರ್​ ಹಾಗೂ 2018ರಲ್ಲಿ ಸಿಎಸ್​ಕೆ ಟ್ರೋಫಿ ಗೆದ್ದಾಗ ಆ ತಂಡಗಳ ಭಾಗವಾಗಿದ್ದರು.

ಮುಂದಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಶೇನ್ ವ್ಯಾಟ್ಸನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಭಾಗವಾಗಿರುವುದಿಲ್ಲ ಎಂದು ಸಿಎಸ್​ಕೆ ತಿಳಿಸಿದ್ದು, ಈ ಮೂಲಕ ಅವರು ನಿವೃತ್ತಿ ಪಡೆದುಕೊಳ್ಳುವುದನ್ನು ಖಚಿತಪಡಿಸಿದೆ. ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ವ್ಯಾಟ್ಸನ್​ ಅವರಿಂದ ಮೂಡಿ ಬಂದಿಲ್ಲ. ಅಕ್ಟೋಬರ್​ 29ರಂದು ಕೆಕೆಆರ್​ ವಿರುದ್ಧ ಇವರು ಕೊನೆಯ ಪಂದ್ಯವನ್ನಾಡಿದ್ದರು.

ಈ ಟೂರ್ನಿಯಲ್ಲಿ ಒಟ್ಟು 11 ಪಂದ್ಯಗಳನ್ನಾಡಿರುವ ವ್ಯಾಟ್ಸನ್​ ಎರಡು ಅರ್ಧಶತಕ ಸೇರಿದಂತೆ 299 ರನ್​ ಗಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಎಸ್​ಕೆ ತಂಡದ ಮ್ಯಾನೇಜ್​ಮೆಂಟ್​​, ಈಗಾಗಲೇ ಡ್ರೆಸ್ಸಿಂಗ್​ ರೂಂನಲ್ಲಿ ವ್ಯಾಟ್ಸನ್ ಇದರ ಬಗ್ಗೆ ಮಾಹಿತಿ ನೀಡಿದ್ದು, ಆಸ್ಟ್ರೇಲಿಯಾಗೆ ಹೋದ ತಕ್ಷಣ ನಿವೃತ್ತಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದಿದೆ.

ABOUT THE AUTHOR

...view details