ಕರ್ನಾಟಕ

karnataka

ETV Bharat / sports

ಟೀಮ್ ಇಂಡಿಯಾಗೆ ಆಯ್ಕೆಯಾದ ನಂತರ ಮೊದಲ ಬಾರಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ ನಟರಾಜನ್ - ಸನ್​ರೈಸರ್ಸ್​ ಹೈಧರಾಬಾದ್​

ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್ ಪಡೆದ ಬೆನ್ನಲ್ಲೇ ಭಾರತ ತಂಡದ ಆಟಗಾರರು ಮೈದಾನಕ್ಕೆ ಆಗಮಿಸಿ ಅಭ್ಯಾಸ ಆರಂಭಿಸಿದ್ದಾರೆ. ಕೊಹ್ಲಿ ಹಾಗೂ ಪೂಜಾರ ಕ್ಯಾಚ್​ ಪ್ರಾಕ್ಟೀಸ್ ಮಾಡಿದರೆ, ವೇಗದ ಬೌಲರ್​ಗಳು ರನ್ನಿಂಗ್ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ.

ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ ನಟರಾಜನ್
ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ ನಟರಾಜನ್

By

Published : Nov 15, 2020, 10:53 PM IST

ಸಿಡ್ನಿ: ಭಾರತ ತಂಡದ ಸೀಮಿತ ಓವರ್​ಗಳ ಸರಣಿ ಹತ್ತಿರ ಬರುತ್ತಿದ್ದು, ಆಸೀಸ್​ ಪ್ರವಾಸದಲ್ಲಿರುವ ಭಾರತ ತಂಡ ಕೋವಿಡ್ ಟೆಸ್ಟ್​ ಮುಗಿಸಿ ನೆಟ್ಸ್​ನಲ್ಲಿ ಅಭ್ಯಾಸ ಆರಂಭಿಸಿದೆ.

ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿರುವ ಯಾರ್ಕರ್​ ಕಿಂಗ್ ನಟರಾಜನ್​ ಬೌಲಿಂಗ್ ಮಾಡುವ ವಿಡಿಯೋವೊಂದನ್ನು ಬಿಸಿಸಿಐ ಶೇರ್​ ಮಾಡಿಕೊಂಡಿದ್ದು, ಮೊದಲ ಬಾರಿಗೆ ಭಾರತ ತಂಡಕ್ಕಾಗಿ ಆಡುವ ಕನಸು ನನಸಾದ ಕ್ಷಣ ಎಂದು ಬರೆದುಕೊಂಡಿದೆ. ನಟರಾಜನ್​ ಸ್ಪಿನ್ನರ್ ವರುಣ್​ ಚಕ್ರವರ್ತಿ ಅವರ ಬದಲಿಗೆ ಭಾರತ ಟಿ20 ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

"2020ರ ಐಪಿಎಲ್​ನಲ್ಲಿ ಸಾಕಷ್ಟು ಯಶಸ್ವಿಯಾಗಿದ್ದ ಟಿ ನಟರಾಜನ್​ ಭಾರತ ತಂಡಕ್ಕೆ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಇದು ಅವರ ಭಾರತ ತಂಡದಲ್ಲಿ ಆಡಬೇಕೆಂಬ ಕನಸು ನನಸಾದ ಕ್ಷಣ" ಎಂದು ಬರೆದುಕೊಂಡು ವಿಡಿಯೋ ಟ್ವೀಟ್ ಮಾಡಿದೆ.

ನಟರಾಜನ್ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡದ ಪರ ಆಡಿದ್ದರು. ಅವರು 16 ಪಂದ್ಯಗಳಿಂದ 15 ವಿಕೆಟ್​ ಪಡೆದು ಮಿಂಚಿದ್ದ ಅವರು ಟೂರ್ನಿಯಲ್ಲಿ ಗರಿಷ್ಠ ಯಾರ್ಕರ್​(160) ಮಾಡಿದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕು ಮುನ್ನ ಮಯಾಂಕ್ ಅಗರ್​ವಾಲ್​ , ಶುಬ್ಮನ್​ ಗಿಲ್ ಮತ್ತು ಮನೀಶ್ ಪಾಂಡೆ ಜಿಮ್​ನಲ್ಲಿ ಪ್ಲಾಂಕ್ ಚಾಲೆಂಜ್ ಮಾಡುವ ಚಿತ್ರಗಳನ್ನು ಶೇರ್ ಮಾಡಿಕೊಂಡಿತ್ತು.

ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್ ಪಡೆದ ಬೆನ್ನಲ್ಲೇ ಭಾರತ ತಂಡದ ಆಟಗಾರರು ಮೈದಾನಕ್ಕೆ ಆಗಮಿಸಿ ಅಭ್ಯಾಸ ಆರಂಭಿಸಿದ್ದಾರೆ. ಕೊಹ್ಲಿ ಹಾಗೂ ಪೂಜಾರ ಕ್ಯಾಚ್​ ಪ್ರಾಕ್ಟೀಸ್ ಮಾಡಿದರೆ, ವೇಗದ ಬೌಲರ್​ಗಳು ರನ್ನಿಂಗ್ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ.

ಭಾರತ ತಂಡದ ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 27 ರಂದು ಮೊದಲ ಏಕದಿನ ಪಂದ್ಯವನ್ನಾಡಲಿದೆ.

ABOUT THE AUTHOR

...view details