ಮುಂಬೈ :5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ 2021ರ ಆವೃತ್ತಿಗಾಗಿ ಶನಿವಾರ ನೂತನ ಜರ್ಸಿ ಬಿಡುಗಡೆ ಮಾಡಿದೆ. ಈ ಜರ್ಸಿಯನ್ನು ಫ್ಯಾಷನ್ ಡಿಸೈನರ್ಗಳಾದ ಶಾಂತನು ಮತ್ತು ನಿಖಿಲ್ ಎಂಬುುವರು ಡಿಸೈನ್ ಮಾಡಿದ್ದಾರೆ.
ಈ ಜರ್ಸಿಯಲ್ಲಿ ವಿಶ್ವದ ಪಂಚಭೂತಗಳಾದ ನೀರು, ಭೂಮಿ, ಬೆಂಕಿ, ಗಾಳಿ ಮತ್ತು ಆಕಾಶಗಳನ್ನು ಸೆರೆಹಿಡಿದಿದ್ದು, ಇವು 5 ಬಾರಿಯ ಚಾಂಪಿಯನ್ ಸಾರವನ್ನು ಸೂಚಿಸುತ್ತಿದೆ ಎಂದು ತಿಳಿದು ಬಂದಿದೆ.
ಜರ್ಸಿ ಮತ್ತು ಅದರ ಸಾರದ ಕುರಿತು ಮಾತನಾಡಿದ ಮುಂಬೈ ಇಂಡಿಯನ್ಸ್ ವಕ್ತಾರರು, "ಮುಂಬೈ ಇಂಡಿಯನ್ಸ್ ಪ್ರತಿವರ್ಷ ತನ್ನ ಮೂಲ ಮೌಲ್ಯಗಳು ಮತ್ತು ಸಿದ್ಧಾಂತಗಳ ಮೇಲೆ ನಿರ್ಮಿಸಲಾದ ಪರಂಪರೆಯನ್ನು ಮುಂದುವರಿಸುತ್ತಿದೆ. ನಮ್ಮ ಐದು ಐಪಿಎಲ್ ಪ್ರಶಸ್ತಿಗಳು ಈ ಮೌಲ್ಯಗಳಿಗೆ ನಮಗಿರುವ ಬದ್ಧತೆಗೆ ಸಾಕ್ಷಿಯಾಗಿದೆ. ಈ ವರ್ಷ ಜರ್ಸಿಯ ಮೂಲಕ ಅದನ್ನು ಸೂಚಿಸಲು ಸಾಧ್ಯವಾಗಿದೆ " ಎಂದು ತಿಳಿಸಿದ್ದಾರೆ.