ಮೆಲ್ಬೋರ್ನ್: ಐಪಿಎಲ್ನಲ್ಲಿ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಲು ಭಾರತಕ್ಕೆ ಬಂದಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಅವರಿಗೆ ಗೌರವ ಸೂಚಿಸಲು ಕಳೆದ ವಾರಾಂತ್ಯದಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮೆರವಣಿಗೆ ನಡೆಸಲಾಗಿದೆ.
ವಿಕ್ಟೋರಿಯಾದಲ್ಲಿ ಕೊರೊನಾ ಲಾಕ್ಡೌನ್ ಇರುವುದರಿಂದ ಕೇವಲ 10 ಮಂದಿ ಮಾತ್ರ ಈ ಕಾರ್ಯಕ್ರಮದ ಭಾಗವಾಗಿದ್ದರು. ಮೈದಾನದಲ್ಲಿ ಮೆರವಣಿಗೆ ವೇಳೆ ಡೀನ್ ಇಷ್ಟಪಡುತ್ತಿದ್ದ ಎಲ್ಟನ್ ಜಾನ್ ಮತ್ತು ಐಎನ್‌ಎಕ್ಸ್‌ಎಸ್ ಮ್ಯೂಸಿಕ್ ಟ್ಯೂನ್ಗಳನ್ನು ಹಾಕಲಾಗಿತ್ತು.
ಜೋನ್ಸ್ ಆಸ್ಟ್ರೇಲಿಯಾಪರ ಆಡಿರುವ 52 ಟೆಸ್ಟ್ ಪಂದ್ಯಗಳಲ್ಲಿ 6 ಪಂದ್ಯಗಳನ್ನು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಆಡಿದ್ದರು. ಅವರ ಶವಪೆಟ್ಟಿಗೆಯನ್ನು ಎಂಸಿಜಿಯ ಸುತ್ತ ಮೆರವಣಿಗೆ ಮಾಡುವ ಮೂಲಕ ವಿಶ್ವದ ಶ್ರೇಷ್ಠ ಆಟಗಾರನಿಗೆ ಗೌರವ ಸಲ್ಲಿಸಲಾಗಿದೆ. ಈ ವಿಡಿಯೋವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಎಂಸಿಜೆ ತನ್ನ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿವೆ.
ಕಳೆದ ಒಂದು ವಾರದಿಂದ ಡೀನ್ ಮೇಲಿನ ಪ್ರೀತಿಯನ್ನು ಹೊರ ಹಾಕುವವರನ್ನು ಕಂಡು ನಾವು ದುಃಖಿತರಾಗಿದ್ದೇವೆ. ಅವರ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಎಲ್ಲರಿಗೂ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಧ್ಯವಿಲ್ಲ ಎಂದು ಡೀನ್ ಪತ್ನಿ ಜಾನೆ ಹೇಳಿದ್ದಾರೆ. ಜೊತೆಗೆ ಡೀನ್ಗೆ ಇಂತಹ ಅದ್ಭುತ ವಿದಾಯವನ್ನು ನೀಡಿದ ಎಂಸಿಜೆ ಹಾಗೂ ಡೀನ್ ಸ್ನೇಹಿತರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಡೀನ್ ಜೋನ್ಸ್ ಸ್ನೇಹಿತ ಬರೆದ ಗೀತೆ
ಮುಂಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ನಿರೂಪಕ ಆಸೀಸ್ ಪರ 52 ಟೆಸ್ಟ್ ಮತ್ತು 164 ಏಕದಿನ ಪಂದ್ಯಗಳನ್ನಾಡಿದ್ದರು.