ಮುಂಬೈ: ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಟೀಂ ಇಂಡಿಯಾ ಆಡುವ 11ರ ಬಳಗದಿಂದ ರಿಷಭ್ ಪಂತ್ ಹೊರಗುಳಿಯುತ್ತಿದ್ದು, ಇದೀಗ ಅವರ ಪರವಾಗಿ ವಿರೇಂದ್ರ ಸೆಹ್ವಾಗ್ ಬ್ಯಾಟ್ ಬೀಸಿದ್ದಾರೆ.
"ಚಾನ್ಸ್ ಸಿಗದಿದ್ದರೆ ಆತ ರನ್ಗಳಿಸುವುದು ಹೇಗೆ"... ಪಂತ್ ಕೈಬಿಟ್ಟಿದ್ದಕ್ಕಾಗಿ ಸೆಹ್ವಾಗ್ ಸಿಡಿಮಿಡಿ! - ರಿಷಭ್ ಪಂತ್
ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಆಡುವ 11ರ ಬಳಗದಿಂದ ರಿಷಭ್ ಪಂತ್ಗೆ ಕೈಬಿಟ್ಟಿದ್ದಕ್ಕಾಗಿ ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮೈದಾನದಲ್ಲಿ ರಿಷಭ್ ಪಂತ್ ರನ್ಗಳಿಕೆ ಮಾಡಲು ಪರದಾಡುತ್ತಿದ್ದಾರೆ ಎಂದು ಕೈಬಿಡಲಾಗಿದೆಯೆ? ಈ ಹಿಂದೆ ಅದೇ ರೀತಿ ಸಚಿನ್ ತೆಂಡೂಲ್ಕರ್ ಅವರನ್ನ ಬೆಂಚ್ ಕಾಯುವಂತೆ ಮಾಡಿದರೆ ಅವರು ಇಷ್ಟೊಂದು ರನ್ಗಳಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ಅವರು ಪಂದ್ಯ ವಿಜೇತರು ಎಂದು ನೀವು ಭಾವಿಸಿದ್ರೆ, ಏಕೆ ಆಡಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಕೊನೆ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ರಿಷಭ್ ಪಂತ್ ಇದೀಗ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಿಂದಲೂ ಹೊರಗುಳಿದಿದ್ದು, ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ 2012ರಲ್ಲಿ ಧೋನಿ ಅಗ್ರ ಮೂವರು(ಸೆಹ್ವಾಗ್,ಸಚಿನ್ ಹಾಗೂ ಗಂಭೀರ್) ಬ್ಯಾಟ್ಸ್ಮನ್ಗಳು ನಿಧಾನಗತಿ ಫೀಲ್ಡರ್ಗಳು ಎಂದು ಹೇಳಿಕೆ ನೀಡಿದ್ದರು.ಆದರೆ ಇದರ ಬಗ್ಗೆ ನಮ್ಮ ಬಳಿ ಯಾವತ್ತೂ ಅವರು ಕೇಳಲಿಲ್ಲ. ಆದರೆ ನಮಗೆ ಮಾಧ್ಯಮಗಳಿಂದ ಈ ಸುದ್ದಿ ಗೊತ್ತಾಯಿತು. ಪಂತ್ಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಇದೀಗ ಅವರಿಗೆ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.