ಮುಂಬೈ:ಭಾರತ ತಂಡದ ಮಾಜಿ ಆಟಗಾರ ಹಾಲಿ ಸಂಸದ ಗೌತಮ್ ಗಂಭೀರ್ ಇದೇ ಮೊದಲ ಬಾರಿಗೆ ಕೊಹ್ಲಿ ನಾಯಕತ್ವವನ್ನು ಹೊಗಳಿದ್ದು, ಅವರ ನಾಯಕತ್ವದ ಯಶಸ್ಸಿಗೆ ಕಾರಣ ಏನೆಂಬುದನ್ನು ತಿಳಿಸಿದ್ದಾರೆ.
ಭಾರತ ತಂಡ ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಇನ್ನು ಒಂದು ಪಂದ್ಯವಿರುವಂತೆ ವಶಪಡಿಸಿಕೊಂಡಿದೆ. ನಾಯಕ ಕೊಹ್ಲಿ, ಮಯಾಂಕ್ ಹಾಗೂ ಬೌಲರ್ಗಳ ಸಂಘಟಿತ ಹೋರಾಟದಿಂದ ದಕ್ಷಿಣ ಆಫ್ರಿಕಾ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ತಾವೂ ನಂಬರ್ ಒನ್ ಟೆಸ್ಟ್ ತಂಡ ಎಂಬುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಸದಾ ಕೊಹ್ಲಿಯನ್ನು ತೆಗೆಳುತ್ತಿದ್ದ ಮಾಜಿ ಆಟಗಾರ ಗೌತಮ್ ಗಂಭೀರ್ ಇದೀಗ ಹರಿಣಗಳ ವಿರುದ್ಧ ಟೆಸ್ಟ್ ಸರಣಿ ಗೆಲ್ಲುತ್ತಿದ್ದಂತೆ ಕೊಹ್ಲಿ ನಾಯಕತ್ವವನ್ನು ಕೊಂಡಾಡಿದ್ದಾರೆ. " ನಿಮಗೆ ಸೋಲಿನ ಭಯವಿದ್ದರೆ, ನೀವು ಎಂದಿಗೂ ಗೆಲ್ಲುವುದಿಲ್ಲ, ಆದರೆ ಕೊಹ್ಲಿಯ ದೊಡ್ಡ ಧನಾತ್ಮಕ ಗುಣವೆಂದರೆ ಅವರೂ ಸೋಲಿಗೆ ಭಯಪಡುವುದಿಲ್ಲ" ಎಂದೂ ಕೊಹ್ಲಿಯ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಕೊಹ್ಲಿ ನಾಯಕತ್ವದ ಯಶಸ್ವಿಗೆ ರೋಹಿತ್ ಹಾಗೂ ಧೋನಿ ಕಾರಣ, ಅವರಿಲ್ಲದಿದ್ದರೆ ಕೊಹ್ಲಿ ನಾಯಕನಾಗಿ ಏನನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಐಪಿಎಲ್ನಲ್ಲಿ ಆರ್ಸಿಬಿ ಒಮ್ಮೆಯೂ ಚಾಂಪಿಯನ್ ಆಗದಿರುವುದೇ ಕಾರಣವೆಂದು ಹೇಳಿಕೆ ನೀಡಿ ಕೊಹ್ಲಿ ಹಾಗೂ ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.