ನವದೆಹಲಿ:2020ರ ಅಕ್ಟೋಬರ್ನಲ್ಲಿ ಪ್ರಾರಂಭವಾಗುವ ಐಸಿಸಿ ಟಿ - 20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನ ಸಿದ್ದಗೊಳಿಸಲಾಗುತ್ತಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
2020 ರಲ್ಲಿ ನಡೆಯುವ ಟಿ 20 ವಿಶ್ವಕಪ್ ಟೂರ್ನಿ ನಮಗೆ ಮಹತ್ವದ್ದಾಗಿದೆ. ಐಸಿಸಿಯ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳಲ್ಲಿರುವ ನಮಗೆ 12 ತಿಂಗಳುಗಳ ಕಾಲಾವಕಾಶವಿದೆ. ಈ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸ್ಪರ್ಧೆಗೆ ಸಿದ್ದಗೊಳ್ಳುತ್ತೇವೆ ಎಂದಿದ್ದಾರೆ.
ಅವಕಾಶ ಸಿಕ್ಕರೆ ಉತ್ತಮ ಪ್ರದರ್ಶನ ನೀಡಲು ಆಟಗಾರರು ಉತ್ಸುಕರಾಗಿದ್ದಾರೆ. ಒಂದು ವೇಳೆ, ಪ್ರತಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಿದ್ದೇ ಆದರೆ ಒಂದು ಉತ್ತಮ ತಂಡವನ್ನ ನಾವು ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗಬಹುದು ಎಂದಿದ್ದಾರೆ.
2007ರಲ್ಲಿ ಆರಂಭವಾದ ಮೊದಲ ಟಿ-20 ವಿಶ್ವಕಪ್ ಟೂರ್ನಿಯನ್ನ ಭಾರತ ತಂಡ ಜಯಗಳಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಟಿ-20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. 2020ರ ಟೂರ್ನಿಯಲ್ಲಿ ಜಯಗಳಿಸಿದ್ರೆ, 2ನೇ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಎಂಬ ಗೌರವ ಸಿಗಲಿದೆ. ವನಿತೆಯರು ಕೂಡ 2020ರ ಟಿ-20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ಭರವಸೆ ಇದೆ ಎಂದಿದ್ದಾರೆ.