ಕರ್ನಾಟಕ

karnataka

ETV Bharat / sports

ಧೋನಿ ಬ್ಯಾಟಿಂಗ್​​​​ ಕ್ರಮಾಂಕದಲ್ಲಿ ಕೊಹ್ಲಿ-ಶಾಸ್ತ್ರಿ ಪ್ರಮಾದ: ಗಂಗೂಲಿ-ಲಕ್ಷ್ಮಣ್​ ಅಸಮಾಧಾನಕ್ಕೆ ಕಾರಣವೇನು? - ಅಸಮಾಧಾನ

ಬುಧವಾರ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ​ ಇಳಿಸಲ್ಪಟ್ಟಿದ್ದು ತಂಡದ ಆಡಳಿತ ಮಂಡಳಿಯ ತಂತ್ರಗಾರಿಕೆಯ ಪ್ರಮಾದ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಹಾಗೂ ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Virat Kohli

By

Published : Jul 11, 2019, 8:39 PM IST

ಮ್ಯಾಂಚೆಸ್ಟರ್​: ಬುಧವಾರ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ​ ಇಳಿಸಲ್ಪಟ್ಟಿದ್ದು ತಂಡದ ಆಡಳಿತ ಮಂಡಳಿಯ ತಂತ್ರಗಾರಿಕೆಯ ಪ್ರಮಾದ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಹಾಗೂ ಲಕ್ಷ್ಮಣ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾದ ರೋಹಿತ್​, ರಾಹುಲ್​ ಹಾಗೂ ಕೊಹ್ಲಿ ಕೇವಲ ಒಂದೊಂದು ರನ್​ ಗಳಿಸಿ ಔಟಾಗಿದ್ದರು. ಆ ಸಂದರ್ಭದಲ್ಲಿ ಅನುಭವಿ ಇಂತಹ ಸನ್ನಿವೇಶಗಳನ್ನು ಹಲವು ಬಾರಿ ಎದುರಿಸಿದ್ದ ಧೋನಿಯನ್ನು ಕಳುಹಿಸುವ ಬದಲು ಯುವ ಆಟಗಾರರಾದ ಪಾಂಡ್ಯ, ಪಂತ್​ರನ್ನು ಕಳುಹಿಸಿ ಕೊಹ್ಲಿ ಹಾಗೂ ಆಡಳಿತ ಮಂಡಳಿ ಮಹಾ ಪ್ರಮಾದ ಎಸಗಿದೆ ಎಂದು ವಿವಿಎಸ್​ ಲಕ್ಷ್ಮಣ್​ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯದ ನಂತರ ಚಾಟ್​ ಶೋದಲ್ಲಿ ಮಾತನಾಡಿರುವ ವಿವಿಎಸ್​ ಲಕ್ಷ್ಮಣ್​, ಆರಂಭಿಕ ಮೂವರು ಒಂದಂಕಿ ಮೊತ್ತಕ್ಕೆ ಔಟಾದ ಸಂದರ್ಭದಲ್ಲಿ ಕಾರ್ತಿಕ್, ಪಾಂಡ್ಯ​ ಬದಲಿಗೆ ಧೋನಿಯನ್ನು ಕಳುಹಿಸಬೇಕಿತ್ತು. ಧೋನಿ ಪಂತ್​ ಜೊತೆ ಒಳ್ಳೆಯ ಇನ್ನಿಂಗ್ಸ್​ ಕಟ್ಟುತ್ತಿದ್ದರು ಎಂದು ಲಕ್ಷ್ಮಣ್​ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಗಂಗೂಲಿ ಕೂಡ ಲಕ್ಷ್ಮಣ್​ರ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದು, ಧೋನಿ ಮೊದಲೇ ಬಂದಿದ್ದರೆ ಸುದೀರ್ಘ ಇನ್ನಿಂಗ್ಸ್​ ಬಳಿಕ ಅವರು ಔಟಾದರೂ ನಮ್ಮ ಮುಂದೆ ಕಾರ್ತಿಕ್​, ಪಾಂಡ್ಯ, ಜಡೇಜಾ ಇರುತ್ತಿದ್ದರು. ಆದರೆ ಕಾರ್ತಿಕ್​ರನ್ನು ಬೇಗ ಕಳುಹಿಸಲಾಯಿತು. ಅವರು ಆರಂಭದಿಂದಲೇ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲರಾದರು ಎಂದು ಗಂಗೂಲಿ ಹೇಳಿದ್ದಾರೆ.

ABOUT THE AUTHOR

...view details