ಕರ್ನಾಟಕ

karnataka

ETV Bharat / sports

ಫ್ಯಾನ್ಸ್​ಗೆ ಕೊಹ್ಲಿ ಅಂದ್ರೆ ಯಾಕಿಷ್ಟು ಅಭಿಮಾನ ಗೊತ್ತಾ? ಈ ವಿಡಿಯೋ ನೋಡಿ - ಕೊಹ್ಲಿ news

ಅಭ್ಯಾಸದ ವೇಳೆ ಮೈದಾನಕ್ಕೆ ಧಾವಿಸಿ ಬಂದ ಅಭಿಮಾನಿಗಳಿಗೆ ಆಟೋಗ್ರಾಫ್​ ಹಾಗೂ ಸೆಲ್ಫಿಗೆ ಪೋಸ್​ ಕೊಡುವ ಮೂಲಕ ಕೊಹ್ಲಿ ಹೃದಯ ವೈಶಾಲ್ಯತೆ ಪ್ರದರ್ಶಿಸಿದ್ರು.

Virat Kohli

By

Published : Aug 3, 2019, 7:16 PM IST

ಫ್ಲೋರಿಡಾ: ಭಾರತ ತಂಡದ ನಾಯಕ ಮೈದಾನದಲ್ಲಿ ಎಷ್ಟು ಆಕ್ರಮಣಕಾರಿಯೋ, ಮೈದಾನದ ಹೊರಗೆ ಅಷ್ಟೇ ಹೃದಯ ವೈಶಾಲ್ಯತೆಯುಳ್ಳ ವ್ಯಕ್ತಿ ಎಂಬುದು ಮತ್ತೊಮ್ಮೆ ನಿಜವಾಗಿದೆ.

ವಿಂಡೀಸ್​ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ಆಭ್ಯಾಸ ಮಾಡುತ್ತಿದ್ದ ವೇಳೆ ಕೊಹ್ಲಿಯನ್ನು ನೋಡಲು ಹಲವಾರು ಭಾರತೀಯ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ನಿರಾಸೆಗೊಳಿಸದ ಕೊಹ್ಲಿ ಎಲ್ಲರಿಗೂ ಆಟೋಗ್ರಾಫ್ ನೀಡುವ ಮೂಲಕ ಅಭಿಮಾನಿಗಳ ಖುಷಿ ಹೆಚ್ಚಿಸಿದ್ರು.

ಪುಟ್ಟ ಮಕ್ಕಳು ತಂದಿದ್ದ ಬ್ಯಾಟ್​​, ಕ್ಯಾಪ್​ ಹಾಗೂ ಟೀ ಶರ್ಟ್​ಗಳಿಗೆ ಕೊಹ್ಲಿ ಸಹಿ ಮಾಡುವ ಮೂಲಕ ಮಕ್ಕಳ ಮುಖದಲ್ಲಿ ನಗು ತರಿಸಿದರು. ಅಲ್ಲದೇ ನೆರೆದಿದ್ದವರ ಜೊತೆ ಸೆಲ್ಫಿಗೆ ಪೋಸ್​ ಕೊಡುವ ಮೂಲಕ ಅವರ ಸಂಭ್ರಮದಲ್ಲಿ ತಾನೂ ಭಾಗಿಯಾದ್ರು.

ಈ ಸಂತಸದ ಕ್ಷಣವನ್ನು ಬಿಸಿಸಿಐ ತನ್ನ ಅಫೀಶಿಯಲ್​ ಟ್ವಿಟರ್​ ಪೇಜ್‌ನಲ್ಲಿ ಪೋಸ್ಟ್​ ಮಾಡಿದ್ದು, ನಾಯಕನಿಗೆ ಅಭಿಮಾನಿಗಳ ಮುಖದಲ್ಲಿ ನಗು ತರಿಸುವುದು ಚೆನ್ನಾಗಿ ತಿಳಿದಿದೆ ಎಂದು ಬರೆದುಕೊಂಡಿದೆ.

ABOUT THE AUTHOR

...view details