ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಇಂದಿಗೆ 11 ವಸಂತ ಪೂರ್ಣಗೊಂಡಿವೆ.
ವಿಶ್ವಕ್ರಿಕೆಟ್ನಲ್ಲಿ ಧೃವತಾರೆಯಂತೆ ಮಿಂಚುತ್ತಿರುವ ಕೊಹ್ಲಿ ಎಲ್ಲಾ ಮಾದರಿಯಲ್ಲೂ ದಾಖಲೆಗಳ ಮೇಲೆ ದಾಖಲೆ ಸಿಡಿಸುತ್ತಾ ಬಂದಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸಚಿನ್ ದಾಖಲೆಗಳ ಬೆನ್ನತ್ತಿರುವ ಕಿಂಗ್ ಕೊಹ್ಲಿ ಇಂದಿಗೆ ಸರಿಯಾಗಿ 11 ವರ್ಷಗಳ ಹಿಂದೆ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದರು.
11 ವರ್ಷಗಳ ಹಿಂದೆ ದೆಹಲಿಯ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗ ಇಂದು ಟೀಂ ಇಂಡಿಯಾದ ನಾಯಕ ಎಂದರೆ ನಂಬಲೇಬೇಕು. ಅಗಸ್ಟ್18,2008ರಂದು ದಂಬುಲಾದಲ್ಲಿ ಶ್ರೀಲಂಕಾ ವಿರುದ್ಧ ಕೊಹ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. ಆ ಬಳಿಕ 2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟ ಅವರು, 2010ರಲ್ಲಿ ಭಾರತ ಪರ ಚೊಚ್ಚಲ ಟಿ20 ಆಡಿದ್ದರು. ಈ 11 ವರ್ಷಗಳಲ್ಲಿ ವಿರಾಟ್ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದು, ಕ್ರಿಕೆಟ್ ಜಗತ್ತಿನಲ್ಲಿ ದಂತಕಥೆ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ, ಬೆಳೆಯುತ್ತಲೂ ಇದ್ದಾರೆ.
2008ರಲ್ಲಿ ಅಂಡರ್ 19 ತಂಡದ ನಾಯಕನಾಗಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದರು. ನಂತರ ಭಾರತ ತಂಡಕ್ಕೆ ಬಹುಬೇಗನೆ ಆಯ್ಕೆಯಾದ ಕೊಹ್ಲಿ ಮೊದಲ ವರ್ಷ ಕೊಂಚ ರನ್ಗಳಿಸಲು ತಿಣುಕಾಡಿದರೂ 2009ರಿಂದ ಇಲ್ಲಿಯವರಗೂ ಹಿಂತಿರುಗಿ ನೋಡದೆ ಚಾಂಪಿಯನ್ ಆಟಗಾರನಾಗಿ ಮುನ್ನುಗ್ಗುತ್ತಿದ್ದಾರೆ.
ಕೊಹ್ಲಿ ಹೆಸರಲ್ಲಿರುವ ವಿಶ್ವದಾಖಲೆಗಳು
1) ವೇಗವಾಗಿ ಏಕದಿನ ಕ್ರಿಕೆಟ್ನಲ್ಲಿ10,000 ರನ್ಸಿಡಿಸಿದ ಬ್ಯಾಟ್ಸ್ಮನ್