ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ನಡೆದ ಸಿಎಸ್ಕೆ ವಿರುದ್ಧದ ಪಂದ್ಯದ ವೇಳೆ ಐಪಿಎಲ್ನಲ್ಲಿ 200ನೇ ಸಿಕ್ಸರ್ ಸಿಡಿಸಿ ದಾಖಲೆ ಬರೆದರು.
ಐಪಿಎಲ್ನಲ್ಲಿ ಈಗಾಗಲೇ ಗರಿಷ್ಠ ರನ್ ಸರದಾರರಾಗಿರುವ ಕೊಹ್ಲಿ 200ನೇ ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ನಲ್ಲಿ 500 ಬೌಂಡರಿ ಹಾಗೂ 200 ಸಿಕ್ಸರ್ ಸಿಡಿಸಿರುವ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದಲ್ಲದೆ ಐಪಿಎಲ್ನಲ್ಲಿ 200 ಸಿಕ್ಸರ್ ಸಿಡಿಸಿರುವ ಐಪಿಎಲ್ನ 5ನೇ ಬ್ಯಾಟ್ಸ್ಮನ್ ಆದರು.
ಕೊಹ್ಲಿಗೂ ಮೊದಲು ಗೇಲ್ (336), ಎಬಿ ಡಿ ವಿಲಿಯರ್ಸ್(231), ಧೋನಿ (215), ರೋಹಿತ್ (209) ಐಪಿಎಲ್ನಲ್ಲಿ 200 ಸಿಕ್ಸರ್ ಸಿಡಿಸಿದ್ದಾರೆ.
ಸಿಎಸ್ಕೆ ವಿರುದ್ಧ ಗರಿಷ್ಠ ಅರ್ಧಶತಕ:
ಈ ಪಂದ್ಯದಲ್ಲಿ 43 ಎಸೆತಗಳಲ್ಲಿ 50 ರನ್ಗಳಿಸಿದ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು. ಕೊಹ್ಲಿ ಸಿಎಸ್ಕೆ ವಿರುದ್ಧ 8 ಅರ್ಧಶತಕ ಬಾರಿಸಿದ್ದರೆ, ರೋಹಿತ್/ಧವನ್ ತಲಾ 7, ಡೇವಿಡ್ ವಾರ್ನರ್ 6, ಗಂಭೀರ್ 5 ಅರ್ಧಶತಕ ದಾಖಲಿಸಿದ್ದಾರೆ.