ಕರ್ನಾಟಕ

karnataka

ETV Bharat / sports

ವಿಜಯ್​ ಹಜಾರೆ ಟ್ರೋಫಿಯಲ್ಲಿ ರಾಹುಲ್ ಕಮಾಲ್.. ಉಪಾಂತ್ಯಕ್ಕೆ ಕರ್ನಾಟಕ ಎಂಟ್ರಿ!

ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾಟೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಪುದಚೆರಿ ತಂಡವನ್ನ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಕೆ.ಎಲ್.ರಾಹುಲ್

By

Published : Oct 20, 2019, 10:34 PM IST

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹಜಾಟೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪುದಚೆರಿ ತಂಡವನ್ನ 8 ವಿಕೆಟ್​ಗಳಿಂದ ಮಣಿಸಿದ ಕರ್ನಾಟಕ ಸೆಮಿಫೈನಲ್​ ತಲುಪಿದೆ.

ಪುದಚೆರಿ ತಂಡ ನೀಡಿದ್ದ 208 ರನ್​ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ಕೆ ಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದ್ರು. ಪಡಿಕ್ಕಲ್ ಅರ್ಧಶತಕ ಸಿಡಿಸಿ ಔಟ್ ಆದ್ರು. ನಂತರ ಬಂದ ರೋಹನ್​ ಕದಮ್ ರಾಹುಲ್ ಜೊತೆ​ಗೂಡಿ ಉತ್ತಮ ರನ್​ ಕಲೆಹಾಕಿದ್ರು.

ಭರ್ಜರಿಯಾಗಿ ಬ್ಯಾಟ್​ ಬೀಸಿದ ರಾಹುಲ್ 90 ರನ್​ಗಳಿಸಿ ಔಟ್​ ಆದ್ರು. ಅಂತಿಮವಾಗಿ ಕರ್ನಾಟಕ ತಂಡ 41 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 213 ರನ್​ಗಳಿಸುವ ಮೂಲಕ 8 ವಿಕೆಟ್​ಗಳ ಜಯ ದಾಖಲಿಸಿತು. ಕರ್ನಾಟಕ ತಂಡದ ಪರ ಕೆ ಎಲ್ ರಾಹುಲ್ 90, ದೇವದತ್ ಪಡಿಕ್ಕಲ್ 50, ರೋಹನ್​ ಕದಮ್ 50 ಮತ್ತು ಮನಿಶ್ ಪಾಂಡೆ 20 ರನ್​ ಗಳಿಸಿದ್ರು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಪುದಚೆರಿ ತಂಡಕ್ಕೆ ಕನ್ನಡಿಗರು ಶಾಕ್ ಮೇಲೆ ಶಾಕ್ ನೀಡಿದ್ರು. ಪ್ರವೀಣ್ ದುಬೆ ಮತ್ತು ಮಿತುನ್ ದಾಳಿಗೆ ತತ್ತರಿಸಿದ ಪುದಚರಿ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ರು. ಸಾಗರ್​ ತ್ರಿವೇದಿ(54), ವೆಂಕಟೇಶ್ವರನ್ ಮಾರಿಮುತ್ತು(58) ಮತ್ತು ಫಬಿದ್ ಅಹ್ಮದ್(37) ರನ್​ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರರು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ.

ಅಂತಿಮವಾಗಿ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 207 ರನ್​ಗಳಿಸಲಷ್ಟೇ ಶಕ್ತವಾಯಿತು. ಕರ್ನಾಟಕ ತಂಡದ ಪರ ಪ್ರವೀಣ್ ದುಬೆ 3, ಕೌಶಿಕ್ 2, ಅಭಿಮನ್ಯು ಮಿಥುನ್ 2 ಮತ್ತು ಪ್ರಸೀದ್ ಕೃಷ್ಣ 1 ವಿಕೆಟ್​ ಪಡೆದು ಮಿಂಚಿದ್ರು.

ABOUT THE AUTHOR

...view details