ಕರ್ನಾಟಕ

karnataka

ETV Bharat / sports

ಮನೆಯಲ್ಲಿ ಐಸೊಲೋಷನ್​ ಕಪ್​... ವಿಶೇಷ ರೀತಿಯಲ್ಲಿ ಕ್ರಿಕೆಟ್​ ಆಡಿ ಗಮನ ಸೆಳೆದ ವೇದಾ ಕೃಷ್ಣಾಮೂರ್ತಿ

ಭಾರತ ಮಹಿಳಾ ತಂಡದಲ್ಲಿರುವ ಕನ್ನಡತಿ ವೇಧಾ ಕೃಷ್ಣಮೂರ್ತಿ ಮನೆಯಲ್ಲೆ ಕ್ರಿಕೆಟ್​ ಟೂರ್ನಿ ಆಯೋಜಿಸುವ ಮೂಲಕ ವಿಶೇಷ ರೀತಿಯಲ್ಲಿ ಸಮಯ ಕಳೆಯುತ್ತಿದ್ದಾರೆ

ಐಸೊಲೋಷನ್​ ಕಪ್
ಐಸೊಲೋಷನ್​ ಕಪ್

By

Published : Apr 16, 2020, 12:42 PM IST

ಮುಂಬೈ:ದೇಶೆದೆಲ್ಲೆಡೆ ಕೊರೊನಾ ದಾಳಿ ತಡೆಗೆ ಲಾಕ್​ಡೌನ್​ ಘೋಷಿಸಿರುವುದರಿಂದ ಮೈದಾನದಲ್ಲಿ ಬ್ಯಾಟ್​-ಬಾಲ್​ ಹಿಡಿದು ಆಡುತ್ತಿದ್ದ ಕ್ರಿಕೆಟಿಗರು ಮನೆಯಲ್ಲಿ ಕಾಲಕಳೆಯುವಂತಾಗಿದೆ.

ಸದಾ ಕ್ರಿಕೆಟ್​ನಲ್ಲಿ ಸಮಯ ಕಳೆಯುತ್ತಿದ್ದ ಕ್ರಿಕೆಟಿಗರು ಇದೀಗ ಮನೆಯಲ್ಲಿ ಇರುವಂತಾಗಿದಎ. ಈ ಸಮಯದಲ್ಲಿ ಕೆಲವು ಕ್ರಿಕೆಟಿಗರು ತಮ್ಮ ಕುಟುಂಬಸ್ಥರ ಜೊತೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ತಾಯಿಗೆ ಅಡುಗೆ ಮಾಡಲು, ಮನೆಕೆಲಸ ಮಾಡಲು ನೆರವಾಗುತ್ತಿದ್ದಾರೆ. ಇನ್ನು ಕೆಲವರು ಲೂಡೋ, ಪಬ್​ ಜಿ ಆಡುವ ಮೂಲಕ ಸಮಯ ಕಳೆಯುತ್ತಿದ್ದಾರೆ.

ಆದರೆ ಭಾರತ ಮಹಿಳಾ ತಂಡದಲ್ಲಿರುವ ಕನ್ನಡತಿ ವೇಧಾ ಕೃಷ್ಣಮೂರ್ತಿ ಮನೆಯಲ್ಲೆ ಕ್ರಿಕೆಟ್​ ಟೂರ್ನಿ ಆಯೋಜಿಸುವ ಮೂಲಕ ವಿಶೇಷ ರೀತಿಯಲ್ಲಿ ಸಮಯ ಕಳೆಯುತ್ತಿದ್ದಾರೆ.

"ನಾವು ಕ್ರಿಕೆಟ್​ ಆಟವನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ನಾವು ಮನೆಯಲ್ಲಿ ಸ್ವಂತ ಕ್ರಿಕೆಟ್ ಲೀಗ್​ ಆಯೋಜಿಸಿಕೊಂಡಿದ್ದೇವೆ. ಐಸೋಲೇಷನ್​ ಕಪ್​ ಅನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ" ಎಂದು ಮನೆಯಲ್ಲಿ ಕ್ರಿಕೆಟ್​ ಆಡುತ್ತಿರುವ ವಿಡಿಯೋವೊಂದನ್ನು ಟ್ವೀಟ್​ ಮಾಡಿದ್ದಾರೆ.

ಈ ವಿಡಿಯೋ ಸಂಪೂರ್ಣ ಎಡಿಟ್​ ಮಾಡಿದ್ದಾಗಿದ್ದು, ಇದರಲ್ಲಿ ವೇದಾ ಕೃಷ್ಣಮೂರ್ತಿ ಬ್ಯಾಟರ್​, ರೀಮಾ ಮೆಲ್ಹೋತ್ರ ಬೌಲರ್, ಅನುಕ್​ ಮೆಲ್ಹೋತ್ರ ಅಂಪೈರ್​, ಮೋನಾ ಮೆಶ್ರಾಮ್​ ಫೀಲ್ಡರ್​, ಆಕಾಂಕ್ಷಾ ಕೊಹ್ಲಿ ಫೀಲ್ಡರ್ ಹಾಗೂ ಇಬ್ಬರು ಬಾಲಕಿಯರು ಪ್ರೇಕ್ಷಕರಾಗಿದ್ದಾರೆ, ಇದಕ್ಕೆ ಲೀಸಾ ಶಲೇಕಾರ್​ ಅವರ ಕಾಮೆಂಟರಿಯನ್ನು ಸಂಯೋಜಿಸಲಾಗಿದೆ.

ಒಂದು ನಿಮಿಷವುಳ್ಳ ಈ ವಿಡಿಯೋಗೆ ಸ್ವತಃ ಐಸಿಸಿ ಕೂಡಾ ಫಿದಾ ಆಗಿದ್ದು ಶೇರ್​ ಮಾಡಿಕೊಂಡಿದೆ. ಈ ಹೊಸ ಯೋಜನೆಗೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.

ABOUT THE AUTHOR

...view details