ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕರ್ನಾಟಕ ಮೂಲದ ಸ್ಪಿನ್ನರ್ ವರುಣ್ ಚಕ್ರವರ್ತಿ ಕೊನೆಗೂ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾಸ್ತುಶಿಲ್ಪ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಇವರು ಕ್ರಿಕೆಟ್ನಿಂದ ಸಂಪೂರ್ಣವಾಗಿ ಬಿಡುವು ಪಡೆದುಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಸಹ ಮಾಡಿದ್ದಾರೆ.
ಆದರೆ 2018ರ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಇವರಿಗೆ 2019ರಲ್ಲಿ ಪಂಜಾಬ್ ತಂಡ ಬರೋಬ್ಬರಿ 8.4 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಆ ವೇಳೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವರುಣ್ ಮೊದಲ ಪಂದ್ಯದಲ್ಲೇ ಅತಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಜತೆಗೆ ಗಾಯಗೊಂಡಿದ್ದ ಅವರು ಟೂರ್ನಿಯಿಂದ ಹೊರಬಿದ್ದಿದ್ದರು. 2020ರ ಐಪಿಎಲ್ ಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಅವರನ್ನ ಪಂಜಾಬ್ ಕೈಬಿಟ್ಟಿತ್ತು. ಹೀಗಾಗಿ 4 ಕೋಟಿ ರೂ. ನೀಡಿ ಕೆಕೆಆರ್ ಖರೀದಿ ಮಾಡಿತ್ತು.