ಲಾಹೋರ್: ಎಪಿಲಪ್ಟಿಕ್ ಫಿಟ್‌ನಿಂದ ಬಳಲುತ್ತಿರುವ ಪಾಕಿಸ್ತಾನದ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿರುವುದಾಗಿ ಪಿಸಿಬಿ ಮಾಜಿ ಅಧ್ಯಕ್ಷ ನಜಂ ಸೇಥಿ ತಿಳಿಸಿದ್ದಾರೆ. ಅವರ ಸಮಸ್ಯೆಗಳನ್ನು ನಿವಾರಿಸಲು ಮನೋವೈದ್ಯರ ಸಹಾಯದ ಅಗತ್ಯವಿದೆ ಎಂದು ಹೇಳಿದರು.
ಉಮರ್ ಅಕ್ಮಲ್‌ಗೆ ಮನೋವೈದ್ಯರ ಸಹಾಯ ಬೇಕು: ಮಾಜಿ ಪಿಸಿಬಿ ಅಧ್ಯಕ್ಷ ನಜಂ ಸೇಥಿ
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪ್ರಾರಂಭವಾಗುವ ಮೊದಲು ನಿಷೇಧ ಶಿಕ್ಷೆಗೊಳಗಾದ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್‌ಗೆ ಮನೋವೈದ್ಯರ ನೆರವು ಬೇಕಿದೆ ಎಂದು ಮಾಜಿ ಪಿಸಿಬಿ ಅಧ್ಯಕ್ಷ ನಜಂ ಸೇಥಿ ತಿಳಿಸಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪ್ರಾರಂಭವಾಗುವ ಮೊದಲು ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾದ ಕಾರಣ ಉಮರ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಂದಿನ ಮೂರು ವರ್ಷಗಳ ಕಾಲ ಯಾವುದೇ ರೀತಿಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿದೆ.
2013 ಮತ್ತು 2018 ರ ನಡುವೆ ಪಿಸಿಬಿಯ ಮುಖ್ಯಸ್ಥರಾಗಿದ್ದ ಸೇಥಿ ಅವರು ಅಧಿಕಾರ ವಹಿಸಿಕೊಂಡಾಗ, ಅವರು ಎದುರಿಸಿದ ಮೊದಲ ಸಮಸ್ಯೆ ಅಕ್ಮಲ್‌ಗೆ ಸಂಬಂಧಿಸಿದೆ ಎಂದು ಹೇಳಿದರು. 2013 ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವರು ಅನುಭವಿಸಿದ ಎಪಿಲಪ್ಟಿಕ್ ಫಿಟ್ ಕಾಯಿಲೆಗೆ ವೈದ್ಯಕೀಯ ಸಹಾಯ ಪಡೆಯಲು ಅಕ್ಮಲ್‌ಗೆ ಸಲಹೆ ನೀಡಿದ್ದರು.