ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ 2020 ಸಾಧಾರಣ ವರ್ಷವಾಗಿದೆ. ಅವರು ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ ಸೋಲು, ಐಪಿಎಲ್ನಲ್ಲಿ ಫೈನಲ್ ತಲುಪಲು ವಿಫಲವಾಗಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧವೂ ಏಕದಿನ ಸರಣಿ ಸೋಲು ಕಂಡಿರುವುದರಿಂದ ಅವರ ನಾಯಕತ್ವದ ಮೇಲೆ ಟೀಕೆಗಳು ಕೇಳಿ ಬರುತ್ತಿದೆ.
ವಿರಾಟ್ ಕೊಹ್ಲಿ ವೈಯಕ್ತಿಕವಾಗಿಯೂ ವೈಫಲ್ಯ ಅನುಭವಿಸಿದ್ದಾರೆ. ಅವರು 2020ರಲ್ಲಿ ಒಂದು ಶತಕವನ್ನೂ ಸಿಡಿಸಿಲ್ಲ. ಹೀಗಿರುವಾಗ ಅಜಿಂಕ್ಯ ರಹಾನೆ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಕೊಹ್ಲಿ ಬದಲಿಗೆ ಭಾರತ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ತಂಡಕ್ಕೂ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಮೆಲ್ಬೋರ್ನ್ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ರಹಾನೆಯನ್ನು ಖಾಯಂ ಟೆಸ್ಟ್ ನಾಯಕನನ್ನಾಗಿ ನೇಮಿಸಬೇಕೆಂದು ಎಂಬ ಚರ್ಚೆ ನಡೆಯುತ್ತಿದೆ,
ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ. ಅವರು ನೇತೃತ್ವದಲ್ಲಿ ಭಾರತ ಆಡಿರುವ 56 ಟೆಸ್ಟ್ ಪಂದ್ಯಗಳಲ್ಲಿ 33 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಆದರೂ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಬೇಕೆಂಬ ಚರ್ಚೆ ಹಚ್ಚಾಗುತ್ತಿದೆ.