ಕರ್ನಾಟಕ

karnataka

ETV Bharat / sports

ಆಸ್ಪತ್ರೆಯಿಂದ ಡಿಸ್ಚಾರ್ಜ್... ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಸಚಿನ್​​​​​

ಸಚಿನ್ ತೆಂಡೂಲ್ಕರ್ ಮಾರ್ಚ್​ 27ರಂದು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದರು. ನಂತರ ಮುನ್ನೆಚ್ಚರಿಕೆಯ ಕ್ರಮವಾಗಿ​ ಏಪ್ರಿಲ್​ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸಚಿನ್​ ಹೊರತುಪಡಿಸಿ ಅವರು ಕುಟುಂಬಸ್ಥರೆಲ್ಲರೂ ನೆಗೆಟಿವ್ ಪಡೆದಿದ್ದರು.

ಸಚಿನ್ ತೆಂಡೂಲ್ಕರ್ ಡಿಸ್ಚಾರ್ಜ್
ಸಚಿನ್ ತೆಂಡೂಲ್ಕರ್ ಡಿಸ್ಚಾರ್ಜ್

By

Published : Apr 8, 2021, 7:29 PM IST

ಮುಂಬೈ: ಕೋವಿಡ್-19 ಸೋಂಕು ತಗುಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಸೇರಿದ್ದ ಭಾರತ ತಂಡದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್​ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಸಂಪೂರ್ಣ ಚೇತರಿಸಿಕೊಳ್ಳುವವರೆಗೂ ಮನೆಯಲ್ಲೇ ಐಸಲೋಷನ್​ಗೆ ಒಳಗಾಗಿದ್ದಾರೆ.

ಇದೇ ತಿಂಗಳು 48ನೇ ವಸಂತಕ್ಕೆ ಕಾಲಿಡಲಿರುವ ಸಚಿನ್ ತೆಂಡೂಲ್ಕರ್​ ತಾವು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ವಿಚಾರವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

"ನಾನು ಈಗಷ್ಟೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದೇನೆ. ಚೇತರಿಸಿಕೊಳ್ಳುವವರೆಗೂ ಮನೆಯಲ್ಲಿ ಐಸೋಲೇಟ್​ ಆಗಲಿದ್ದೇನೆ. ನಿಮ್ಮೆಲ್ಲಾ ಶುಭಾಶಯಗಳು ಮತ್ತು ಪ್ರಾರ್ಥನೆಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಜವಾಗಿಯೂ ಪ್ರಶಂಸಿಸುತ್ತೇನೆ" ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ. ಸಚಿನ್ ತಾವು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ನೋಡಿಕೊಂಡಂತಹ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೂ ಸಹ ಧನ್ಯವಾದ ತಿಳಿಸಿದ್ದಾರೆ.

ನನ್ನನ್ನು ಚೆನ್ನಾಗಿ ನೋಡಿಕೊಂಡ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ ಮತ್ತು ಕೋವಿಡ್​ನಂತಹ ಕಠಿಣ ಪರಿಸ್ಥಿತಿಯಲ್ಲೂ ಒಂದು ವರ್ಷದಿಂದ ಅವಿಶ್ರಾಂತವಾಗಿ ದುಡಿಯುತ್ತಿರುವವರಿಗೂ ನನ್ನ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ಮಾರ್ಚ್​ 27ರಂದು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದರು. ನಂತರ ಮುನ್ನೆಚ್ಚರಿಕೆಯ ಕ್ರಮವಾಗಿ​ ಏಪ್ರಿಲ್​ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸಚಿನ್​ ಹೊರತುಪಡಿಸಿ ಅವರು ಕುಟುಂಬಸ್ಥರೆಲ್ಲರೂ ನೆಗೆಟಿವ್ ಪಡೆದಿದ್ದರು.

ಇದನ್ನು ಓದಿ:'ಗೆಟ್ ವೆಲ್​ ಸೂನ್​ ಮಾಸ್ಟರ್‌ ಬ್ಲಾಸ್ಟರ್': ಸಚಿನ್​ಗೆ​ ವಿವಿಯನ್ ರಿಚರ್ಡ್ಸ್ ಹಾರೈಕೆ

ABOUT THE AUTHOR

...view details