ಕರ್ನಾಟಕ

karnataka

ETV Bharat / sports

ಭಾರತೀಯ ರಾಯಭಾರ ಕಚೇರಿ ಅಧಿಕಾರಿ ಜತೆ ಕಿರಿಕ್​... ಟೀಂ ಇಂಡಿಯಾ ಮ್ಯಾನೇಜರ್​ಗೆ ಬಿಸಿಸಿಐ ಛೀಮಾರಿ!

ವೆಸ್ಟ್​ ಇಂಡೀಸ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿ ಜತೆ ಕಿರಿಕ್​ ಮಾಡಿಕೊಂಡಿರುವ ಟೀಂ ಇಂಡಿಯಾ ಮ್ಯಾನೇಜರ್​ಗೆ ಬಿಸಿಸಿಐ ಛೀಮಾರಿ ಹಾಕಿದೆ.

ಟೀಂ ಇಂಡಿಯಾ ಮ್ಯಾನೇಜರ್/Team India manager

By

Published : Aug 14, 2019, 5:37 PM IST

​​ಮುಂಬೈ:ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಕೆರಿಬಿಯನ್​ ಪ್ರವಾಸದಲ್ಲಿದ್ದು, ವೆಸ್ಟ್​ ಇಂಡೀಸ್​ ತಂಡದೊಂದಿಗೆ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಿದೆ. ಈ ವೇಳೆ ಟೀಂ ಇಂಡಿಯಾ ತಂಡದ ಮ್ಯಾನೇಜರ್​​​ ಸುನಿಲ್​​ ಸುಬ್ರಮಣಿಯಂ ಟ್ರಿನಿಡಾಡ್‌ ಹಾಗೂ ಟೊಬೇಗೋಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಕೇಂದ್ರ ಸರ್ಕಾ​ರದ ಮಾರ್ಗ​ಸೂಚಿ ಅನು​ಸ​ರಿಸಿ ಟೀಂ ಇಂಡಿಯಾ ಜಲ ಸಂರ​ಕ್ಷಣೆ ಕುರಿ​ತು ಸಣ್ಣ ಜಾಹೀ​ರಾತು ಮಾಡಬೇಕಾಗಿತ್ತು. ಪ್ಲೇಯರ್​​ ವೇಳಾಪಟ್ಟಿ ನೋಡಿಕೊಂಡು ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲು ಟೀಂ ಇಂಡಿಯಾ ಮ್ಯಾನೇಜರ್​​ ಸುನಿಲ್‌ರನ್ನು ಸಂಪರ್ಕಿಸುವಂತೆ ಅಲ್ಲಿನ ರಾಯಭಾರ ಕಚೇರಿಗೆ ಬಿಸಿಸಿಐ ತಿಳಿಸಿತ್ತು. ಈ ವೇಳೆ ಅಲ್ಲಿನ ರಾಯಭಾರ ಕಚೇರಿ ಅಧಿಕಾರಿಗಳು ಕರೆ ಮಾಡಿದಾಗ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಬಿಸಿಸಿಐ ಸಿಇಒ ರಾಹುಲ್​ ಜೊಹ್ರಿ ತಕ್ಷಣವೇ ಭಾರತಕ್ಕೆ ಮರಳುವಂತೆ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ವೆಸ್ಟ್​ ಇಂಡೀಸ್​ ಪ್ರವಾಸ ಮುಕ್ತಾಯಗೊಳ್ಳುತ್ತಿದ್ದಂತೆ ಸುನಿಲ್​ ಅವರ ಅಧಿಕಾರವಧಿ ಮುಕ್ತಾಯಗೊಳ್ಳಲಿದ್ದು, ಮತ್ತೊಂದು ಅವಧಿಗೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. 52 ವರ್ಷದ ಸುಬ್ರಮಣಿಯಂ ಟೀಂ ಇಂಡಿಯಾ ಆಲ್​ರೌಂಡರ್​ ಆರ್​ ಅಶ್ವಿನ್​ ಅವರ ಕೋಚ್​ ಎಂಬುದು ವಿಶೇಷ. 74 ಮೊದಲ ದರ್ಜೆ ಕ್ರಿಕೆಟ್​ ಆಡಿರುವ ಇವರು 285 ವಿಕೆಟ್​ ಪಡೆದುಕೊಂಡಿದ್ದಾರೆ.

ABOUT THE AUTHOR

...view details