ನವದೆಹಲಿ:ಆಗಸ್ಟ್ 15ರಂದು ಮಹೇಂದ್ರ ಸಿಂಗ್ ಧೋನಿ ಜತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರ ಸಾಧನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಎರಡು ಪುಟಗಳ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ನಿಮ್ಮ ಆ ಇನ್ನಿಂಗ್ಸ್ ನನಗೆ ಇನ್ನೂ ನೆನಪಿದೆ: ಸುರೇಶ್ ರೈನಾಗೆ ಪ್ರಧಾನಿ ಮೋದಿ ಪತ್ರ
ಪ್ರಧಾನಿ ಪತ್ರಕ್ಕೆ ಸಂತಸ ವ್ಯಕ್ತಪಡಿಸಿರುವ ರೈನಾ, ದೇಶಕ್ಕಾಗಿ ನಾವು ಆಡುವಾಗ ನಮ್ಮ ರಕ್ತ ಮತ್ತು ಬೆವರನ್ನು ಹರಿಸುತ್ತೇವೆ. ಈ ದೇಶದ ಜನರಿಂದ ಮತ್ತು ದೇಶದ ಪ್ರಧಾನ ಮಂತ್ರಿಯಿಂದ ಪ್ರೀತಿಸಲ್ಪಡುವುದಕ್ಕಿಂತ ಉತ್ತಮವಾದ ಮೆಚ್ಚುಗೆಯಿಲ್ಲ. ನಿಮ್ಮ ಮೆಚ್ಚುಗೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.