ನವದೆಹಲಿ:ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಭಾರತ-ಪಾಕಿಸ್ತಾನ ಆಟಗಾರರನ್ನು ಒಂದುಗೂಡಿಸಿ ಬೆಸ್ಟ್ ಇಲೆವೆನ್ ತಂಡವನ್ನು ಘೋಷಿಸಿದ್ದಾರೆ. ಆದರೆ ಇದು ಅಂಕಿ-ಅಂಶಗಳ ಆಧಾರದ ಮೇಲಿನ ತಂಡವಲ್ಲ ಬದಲಾಗಿ ಈ ಆಟಗಾರರು ಒಟ್ಟಿಗೆ ಆಡಿದರೆ ತುಂಬಾ ಮಜಾ ಇರುತ್ತದೆ ಎಂದಿದ್ದಾರೆ.
ಪಾಕಿಸ್ತಾನದ ಮಾಜಿ ಆಟಗಾರ ರಮೀಝ್ ರಾಜಾ ಅವರ ಜೊತೆ ಲೈವ್ನಲ್ಲಿ ಮಾತನಾಡಿದ ಅವರು, ಈ ಆಟಗಾರರು ಒಟ್ಟಿಗೆ ಆಡಿದರೂ ಅಥವಾ ಆಡದಿದ್ದರೂ ಏನಾಗುತ್ತದೆ ಎಂಬುದು ಬೇಕಾಗಿಲ್ಲ. ಆದರೆ ಡ್ರೆಸ್ಸಿಂಗ್ ರೂಮ್ನಲ್ಲಿ ಬಹಳಷ್ಟು ಮಜಾ ಮಾತ್ರ ನಿರೀಕ್ಷಿಸುತ್ತೇನೆ. ಈ ಹುಡುಗರನ್ನು ಡ್ರೆಸ್ಸಿಂಗ್ ರೂಮ್ನಿಂದ ಹೊರ ತರುವುದೇ ಕಷ್ಟವಾಗುತ್ತದೆ. ಏಕೆಂದರೆ ಇವರೆಲ್ಲಾ ಮೋಜು ಮಾಡುತ್ತಾರೆ ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಆದರೆ ಈ ತಂಡದಲ್ಲಿ ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿಯನ್ನು ಕೈಬಿಟ್ಟಿದ್ದಾರೆ.