ಕೊಲಂಬೊ(ಶ್ರೀಲಂಕಾ): ಶ್ರೀಲಂಕಾ ಕ್ರಿಕೆಟ್ನ ಬೌಲರ್ ಧಮ್ಮಿಕಾ ಪ್ರಸಾದ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೊಷಣೆ ಮಾಡಿದ್ದು, ಸಿಂಹಳೀಯರ ತಂಡದ ಪರ ಈ ಪ್ಲೇಯರ್ 75 ವಿಕೆಟ್ ಪಡೆದುಕೊಂಡಿದ್ದಾರೆ.
24 ಏಕದಿನ ಪಂದ್ಯಗಳಿಂದ 32 ವಿಕೆಟ್ ಪಡೆದುಕೊಂಡಿರುವ ಈ ಪ್ಲೇಯರ್ 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಟೆಸ್ಟ್ವೊಂದರಲ್ಲಿ 5 ವಿಕೆಟ್ ಪಡೆದುಕೊಂಡು ಎಲ್ಲರ ಗಮನ ಸೆಳೆದಿದ್ದರು. 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆ ಕ್ರಿಕೆಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ 37 ವರ್ಷದ ಪ್ರಸಾದ್ ಇದೀಗ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಘೋಷಣೆ ಮಾಡಿದ್ದಾರೆ.25 ಟೆಸ್ಟ್ ಪಂದ್ಯಗಳಿಂದ 75 ವಿಕೆಟ್, 24 ಏಕದಿನ ಪಂದ್ಯಗಳಿಂದ 32 ವಿಕೆಟ್ ಹಾಗೂ ಏಕೈಕ ಟಿ - 20 ಪಂದ್ಯ ಆಡಿ ಯಾವುದೇ ವಿಕೆಟ್ ಪಡೆದುಕೊಂಡಿಲ್ಲ.