ಕರ್ನಾಟಕ

karnataka

ETV Bharat / sports

ಶ್ರೀಲಂಕಾ ವಿರುದ್ಧ 2-0ಯಲ್ಲಿ ಟೆಸ್ಟ್​ ಸರಣಿ ಕ್ಲೀನ್​​ ಸ್ವೀಪ್​ ಸಾಧಿಸಿದ ಇಂಗ್ಲೆಂಡ್ - ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿ ಜಯಿಸಿದ ಇಂಗ್ಲೆಂಡ್​

ಮೊದಲ ಇನ್ನಿಂಗ್ಸ್​ನಲ್ಲಿ 37 ರನ್​ ಇನ್ನಿಂಗ್ಸ್​ ಮುನ್ನಡೆಯ ಹೊರತಾಗಿಯೂ ಶ್ರೀಲಂಕಾ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 126 ರನ್​ಗಳಿಗೆ ಆಲೌಟ್ ಆಗುವ ಮೂಲಕ ಪ್ರವಾಸಿ ಇಂಗ್ಲೆಂಡ್​ಗೆ 164 ರನ್​ಗಳ ಸುಲಭ ಟಾರ್ಗೆಟ್ ನೀಡಿತ್ತು. ಇಂಗ್ಲೆಂಡ್​ ತಂಡ 43.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಟೆಸ್ಟ್​ ಸರಣಿಯನ್ನು 2-0 ಯಲ್ಲಿ ಕ್ಲೀನ್ ಸ್ವೀಪ್​ ಮಾಡಿತು.

ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ ಸರಣಿ ಜಯ
ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ ಸರಣಿ ಜಯ

By

Published : Jan 25, 2021, 6:34 PM IST

ಗಾಲೆ: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್​ ಪಂದ್ಯವನ್ನು 6 ವಿಕೆಟ್​ಗಳಿಂದ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ ಸರಣಿಯನ್ನು 2-0 ಯಲ್ಲಿ ಕ್ಲೀನ್​ ಸ್ವೀಪ್​ ಮಾಡಿದೆ.

ಮೊದಲ ಇನ್ನಿಂಗ್ಸ್​ನಲ್ಲಿ 37 ರನ್​ ಇನ್ನಿಂಗ್ಸ್​ ಮುನ್ನಡೆಯ ಹೊರತಾಗಿಯೂ ಶ್ರೀಲಂಕಾ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 126 ರನ್​ಗಳಿಗೆ ಆಲೌಟ್ ಆಗುವ ಮೂಲಕ ಪ್ರವಾಸಿ ಇಂಗ್ಲೆಂಡ್​ಗೆ 164 ರನ್​ಗಳ ಸುಲಭ ಟಾರ್ಗೆಟ್ ನೀಡಿತ್ತು. ಇಂಗ್ಲೆಂಡ್​ ತಂಡ 43.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ, 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಟೆಸ್ಟ್​ ಸರಣಿಯನ್ನು 2-0 ಯಲ್ಲಿ ಕ್ಲೀನ್ ಸ್ವೀಪ್​ ಮಾಡಿತು.

ಮೂರು ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದ, ಡೊಮಿನಿಕ್​ ಸಿಬ್ಲೆ ಅಜೇಯ 56 ರನ್​ಗಳಿಸಿದರೆ, ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ ಜೋಸ್ ಬಟ್ಲರ್​ ಅಜೇಯ 46 ರನ್​ಗಳಿಸಿ ಗೆಲುವಿನ ರೂವಾರಿಯಾದರು.

ಇದಕ್ಕೂ ಮುನ್ನ 37 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದ ಶ್ರೀಲಂಕಾ ಡಾಮ್​ ಬೆಸ್​ ಮತ್ತು ಜ್ಯಾಕ್​ ಲೀಚ್​ ದಾಳಿಗೆ 35.5 ಓವರ್​ಗಳಲ್ಲಿ 126 ರನ್​ಗಳಿಗೆ ಆಲೌಟ್​ ಆಗಿತ್ತು. 10ನೇ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿದಿದ್ದ ಎಂಬುಲ್ಡೇನಿಯಾ 40 ರನ್​ಗಳಿಸಿ ಶ್ರೀಲಂಕಾ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಇಂಗ್ಲೆಂಡ್​ ಪರ ಜ್ಯಾಕ್​ ಲೀಚ್ 59ಕ್ಕೆ 4, ಡಾಮ್ ಬೆಸ್​ 49ಕ್ಕೆ 4, ರೂಟ್​ ಯಾವುದೇ ರನ್​ ನೀಡದೆ 2 ವಿಕೆಟ್​ ಪಡೆದರು. ಶ್ರೀಲಂಕಾ ಮೊದಲ ಇನ್ನಿಂಗ್ಸ್​ನಲ್ಲಿ 381 ರನ್​ಗಳಿಸಿದ್ದರೆ, ಇಂಗ್ಲೆಂಡ್​ 344 ರನ್​ ಗಳಿಸಿತ್ತು.

ಇದನ್ನು ಓದಿ:ಆಸೀಸ್​ ವಿರುದ್ಧದ ಬಾಕ್ಸಿಂಗ್​ ಟೆಸ್ಟ್​ಗೂ ಮುನ್ನ ಸಚಿನ್​ರ ಆ ಇನ್ನಿಂಗ್ಸ್​ 10 ಬಾರಿ ವೀಕ್ಷಿಸಿದ್ದೆ: ರಹಾನೆ

ABOUT THE AUTHOR

...view details