ಮೆಲ್ಬೋರ್ನ್:ಸೆಪ್ಟಂಬರ್ 15ರಿಂದ ಟೀಂ ಇಂಡಿಯಾ ವಿರುದ್ಧ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಂಡ ಪ್ರಕಟ ಮಾಡಿದ್ದು, ಐಸಿಸಿ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಹೊಸ ಹೊಸ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ಕಲ್ಪಿಸಿದೆ.
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಹೀನಾಯ ಸೋಲು ಕಂಡಿದ್ದರಿಂದ ಅಲ್ಲಿನ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದ್ದು, ಟೆಸ್ಟ್ ಹಾಗೂ ಟಿ-20 ಸರಣಿಯಲ್ಲಿ ಕೆಲವೊಂದು ಹೊಸ ಪ್ರತಿಭೆಗಳಿಗೆ ಮಣೆ ಹಾಕಿದೆ. ಸೆಪ್ಟಂಬರ್ 15ರಿಂದ ಅಕ್ಟೋಬರ್ 23ವರೆಗೆ ದಕ್ಷಿಣ ಆಫ್ರಿಕಾ ತಂಡ ಭಾರತದ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಮೂರು ಟಿ-20 ಹಾಗೂ ಮೂರು ಟೆಸ್ಟ್ ಪಂದ್ಯಗಳು ನಡೆಯಲಿವೆ.
ಟಿ-20 ತಂಡವನ್ನ ಕ್ವಿಂಟನ್ ಡಿಕಾಕ್ ಮುನ್ನಡೆಸಲಿದ್ದು, ರಾಸ್ಸಿ ವಾನ್ ಡೆರ್ ಡುಸೆನ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಟೆಸ್ಟ್ ಸರಣಿಯಲ್ಲಿ ಫಾಫ್ ಡು ಪ್ಲೆಸಿಸ್ ಕ್ಯಾಪ್ಟನ್ ಆಗಿದ್ದು, ಟೆಂಬಾ ಬಾವುಮಾ ಉಪನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಐಡೆನ್ ಮಾರ್ಕ್ರಮ್, ಥ್ಯೂನಿಸ್ ಡಿ ಬ್ರೂಯಿನ್ ಮತ್ತು ಲುಂಗಿ ಎನ್‌ಗಿಡಿ ಅವರನ್ನ ಟೆಸ್ಟ್ ಸರಣಿ ದೃಷ್ಠಿಯಿಂದ ಟಿ-20 ತಂಡಕ್ಕೆ ಆಯ್ಕೆ ಮಾಡಿಕೊಂಡಿಲ್ಲ.
ತಂಡ ಇಂತಿದೆ
ಟೆಸ್ಟ್ ತಂಡ:
ಫಾಫ್ ಡುಪ್ಲೆಸಿಸ್(ನಾಯಕ), ತೆಂಬಾ ಬುವುಮಾ(ಉಪನಾಯಕ), ಥೆನಿಸ್ ಡೆ ಬ್ರುಯನ್, ಕ್ವಿಂಟನ್ ಡಿಕಾಕ್, ಡೀನ್ ಎಲ್ಗರ್, ಜುಬ್ಯರ್ ಹಂಝಾ, ಕೇಶವ್ ಮಹರಾಜ್, ಆ್ಯಡಿನ್ ಮಕ್ರಂ, ಸೆನುರನ್ ಮುಥುಸಾಮಿ, ಲುಂಗಿ ಎನ್‌ಗಿಡಿ, ಅನಿರಿಚ್ ನೊರ್ಜೆ, ವರ್ನಾನ್ ಫಿಲಾಂಡರ್, ಡೇನ್ ಪೀಡೆಟ್, ಕಾಗಿಸೋ ರಬಾಡ, ರುಡಿ ಸೆಕಂಡ್
ಟಿ-20 ತಂಡ:ಕ್ವಿಂಟನ್ ಡಿಕಾಕ್(ನಾಯಕ), ರಸ್ಸಿ ವ್ಯಾಂಡರ್ ಡಸೆನ್, ತೆಂಬಾ ಬವುಮಾ, ಜುನಿಯರ್ ಡಾಲ, ಬಿಜಾರ್ನ್ ಫೂರ್ಚುನಿ, ಬ್ಯುರನ್ ಹೆಂಡ್ರಿಕ್ಸ್, ರೀಝ್ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಅನಿರಿಚ್ ನೊರ್ಜೆ, ಆ್ಯಂಡಿಲೆ ಫೆಲುಕ್‌ವಾಯೊ, ಡ್ವೈನಿ ಪ್ರೆಟ್ರೋರಿಯಸ್, ಕಾಗಿಸೋ ರಬಾಡ, ತಬ್ರೈಝ್ ಶಂಶಿ, ಜಾನ್ ಜಾನ್ ಸ್ಮಟ್ಸ್